Wednesday, June 24, 2026
Homeಕರಾವಳಿಉಡುಪಿಕುಂದಾಪುರ: ದೇವಸ್ಥಾನದಲ್ಲಿ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದಾತನ ಸಾವು

ಕುಂದಾಪುರ: ದೇವಸ್ಥಾನದಲ್ಲಿ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದಾತನ ಸಾವು

- Advertisement -
- Advertisement -

ಕುಂದಾಪುರ: ಗಂಗೊಳ್ಳಿಯ ದೇವಸ್ಥಾನವೊಂದರಲ್ಲಿ ನಿನ್ನೆ ಮಧ್ಯಾಹ್ನದ ಸುಮಾರಿಗೆ ಸ್ಥಳಿಯ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.

ಗಂಗೊಳ್ಳಿ ದಾಕಹಿತ್ಲುವಿನ ನಿವಾಸಿ ರಾಘವೇಂದ್ರ ಖಾರ್ವಿ(34) ಮೃತ ವ್ಯಕ್ತಿ.

ಗುರುವಾರ ಮಹಾಲಯ ಅಮಾವಾಸ್ಯೆ ಪೂಜೆ ಇದ್ದ ಹಿನ್ನೆಲೆ ಭಕ್ತಾಧಿಗಳು ಗಂಗೊಳ್ಳಿಯ ಖಾರ್ವಿಕೇರಿ ಸಮೀಪದಲ್ಲಿರುವ ದೇವಸ್ಥಾನಕ್ಕೆ ಬಂದಿದ್ದರು‌. ಇದೇ ವೇಳೆ ಪೆಟ್ರೋಲ್ ಕ್ಯಾನ್ ಹಿಡಿದು ಬಂದ ರಾಘವೇಂದ್ರ ಮೈಮೇಲೆ ಸುರಿದುಕೊಂಡಿದ್ದು ಸಮೀಪದ ಕಾಲು ದೀಪದ ಬೆಂಕಿ ತಗುಲಿ ನೋಡನೋಡುತ್ತಿದ್ದಂತೆಯೇ ಬೆಂಕಿ ಹತ್ತಿಕೊಂಡಿದ್ದು ಬಚಾವ್ ಮಾಡಲು ಹೋದ ಲಕ್ಷ್ಮಣ್ ಖಾರ್ವಿ ಹಾಗೂ ಜನಾರ್ದನ ಖಾರ್ವಿ ಅವರಿಗೂ ಸುಟ್ಟ ಗಾಯಗಳಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ರಾಘವೇಂದ್ರ ಖಾರ್ವಿ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಯುತ್ತಿದೆ. 

- Advertisement -

Latest News

error: Content is protected !!