Thursday, June 4, 2026
Homeಚಿಕ್ಕಮಗಳೂರುಸಾಕ್ಷಿ ಕೇಳುವ ಸೋಗಲಾಡಿ ಜಾತ್ಯಾತೀತ ಮೂರ್ಖರಿಗೆ ಮಂಗಳೂರಿನಲ್ಲಿ ಸಾಕ್ಷಿ ಸಿಕ್ಕಿದೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ...

ಸಾಕ್ಷಿ ಕೇಳುವ ಸೋಗಲಾಡಿ ಜಾತ್ಯಾತೀತ ಮೂರ್ಖರಿಗೆ ಮಂಗಳೂರಿನಲ್ಲಿ ಸಾಕ್ಷಿ ಸಿಕ್ಕಿದೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ

- Advertisement -
- Advertisement -

ಚಿಕ್ಕಮಗಳೂರು: ಇಸ್ಲಾಂ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಸಿ.ಟಿ. ರವಿ ಕಿಡಿಕಾರಿದ್ದಾರೆ.‌ 32 ಸಾವಿರಕ್ಕೂ ಅಧಿಕ ದೇವಾಲಯಗಳ ನಾಶ ಮಾಡಿ ಮಸೀದಿ, ದರ್ಗಾ ನಿರ್ಮಿಸಿದ್ದಾರೆ ಎಂದು ಹೇಳುತ್ತಿದ್ದೆವು, ಸಾಕ್ಷಿ ಕೇಳುವ ಜಾತ್ಯಾತೀತ ಸೋಗಲಾಡಿ ಮೂರ್ಖರಿಗೆ ಮಂಗಳೂರಲ್ಲಿ ಸಾಕ್ಷಿ ಸಿಕ್ಕಿದೆ ಎಂದು ರವಿ ಹೇಳಿದ್ದಾರೆ.

ಮಂಗಳೂರಿನಲ್ಲಿ ದರ್ಗಾದಲ್ಲಿ ದೇವಾಲಯದ ಮಾದರಿ ಪತ್ತೆಯಾಗಿರುವುದನ್ನು ಉಲ್ಲೇಖಿಸಿ ಮಾತನಾಡಿದ ರವಿ, ಅಂಗೈ ಹುಣ್ಣಿಗೆ ದಾಖಲೆ ಬೇಕಿಲ್ಲ, ಮುಸಲ್ಮಾನರೇ ದಾಖಲೆಗಳಲ್ಲಿ ವೈಭವೀಕರಿಸಿ ಹೇಳಿಕೊಂಡಿದ್ದಾರೆ. ಶಿವ, ವಿಷ್ಣು, ರಾಮ ಮಂದಿರ ನಾಶ ಮಾಡಿದ್ದೆವು ಎಂದು ಅವರೇ ಹೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಮಾತನಾಡಿದ ಸಿ.ಟಿ. ರವಿ,
ಈಗಲೂ ಇಸ್ಲಾಂ ಶಾಂತಿಗಾಗಿ ಎಂದು ಯಾರಾದರೂ ಹೇಳಿದ್ರೆ ಅವರಿಂದ ರಾಷ್ಟ್ರ ಉಳಿಯಲು ಸಾಧ್ಯವಿಲ್ಲ. ನಾಶ ಮಾಡಿಯೇ ಇಸ್ಲಾಂ ಬೆಳೆದಿರೋದು, ನಾಶ ಮಾಡಿಯೇ ಅದು ಬೆಳೆದಿರೋದು ಎಂದು ಹೇಳಿದ್ದಾರೆ.

ಅಲ್ಲದೇ, ಸತ್ಯ ಒಪ್ಪಿಕೊಳ್ಳಲಿ, ಇಲ್ಲ ಈಗಲೇ ಮತಾಂತರ ಆಗುವವರಿದ್ರೆ ಆಗಲಿ. ನಾವು ಎಲ್ಲವನ್ನೂ ನೇರವಾಗಿ ಎದುರಿಸುತ್ತೇವೆ.
ಹಿಂದೂ ಹೆಸರಲ್ಲಿ ಹಿಂದೂ ಧರ್ಮಕ್ಕೆ ದ್ರೋಹ ಮಾಡುವುದು ಬೇಡ ಎಂದು ರವಿ ಹೇಳಿದ್ದಾರೆ. ‌

- Advertisement -

Latest News

error: Content is protected !!