Monday, April 29, 2024
Homeತಾಜಾ ಸುದ್ದಿಕಠಿಣವಾಗಿರಲಿದೆ ಮುಂದಿನ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆ

ಕಠಿಣವಾಗಿರಲಿದೆ ಮುಂದಿನ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆ

spot_img
- Advertisement -
- Advertisement -

ಬೆಂಗಳೂರು: 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸ್ವರೂಪವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ಕೋವಿಡ್ ಸಮಯದಲ್ಲಿ ಇದ್ದಂತಹ ಸರಳತೆಯ ಪ್ರಮಾಣವನ್ನು ಕೈಬಿಡಲಾಗಿದ್ದು, ಕಠಿಣ ಸ್ವರೂಪದ ಪ್ರಶ್ನೆಗಳನ್ನು ಹೆಚ್ಚಿಸಲಾಗಿದೆ.

ಪ್ರಶ್ನೆ ಪತ್ರಿಕೆ ಸ್ವರೂಪ ಬದಲಿಸಿದ ಬಗ್ಗೆ ಮಾಹಿತಿ ಬಿಡುಗಡೆಗೊಳಿಸಲಾಗಿದ್ದು, ಈ ಬಾರಿ ಸುಲಭ ಪ್ರಶ್ನೆ ಶೇಕಡಾ 30, ಸಾಧಾರಣ ಪ್ರಶ್ನೆ ಶೇಕಡಾ 50 ಮತ್ತು ಕಠಿಣ ಪ್ರಶ್ನೆ ಶೇಕಡಾ 20 ಸೇರಿದಂತೆ ಒಟ್ಟು 100 ಅಂಕಗಳಿಗೆ ಸರಿಸಮವಾಗಿ ಪ್ರಶ್ನೆ ಪತ್ರಿಕೆಯನ್ನು ರೂಪಿಸಲಾಗಿದೆ.

ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಸೋಂಕು ಹರಡಿದ್ದ ಕಾರಣದಿಂದಾಗಿ ಸರಳವಾದ ಪ್ರಶ್ನೆ ಪತ್ರಿಕೆಯ ಜೊತೆಗೆ ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ನೀಡಲಾಗಿತ್ತು.

ಅಲ್ಲದೇ ಕಳೆದ 2 ವರ್ಷಗಳ ಕಾಲ ಶೇಕಡಾ 75 ಹಾಜರಾತಿಗೆ ನೀಡಲಾಗಿದ್ದ ವಿನಾಯತಿಯನ್ನು ಮುಂದಿನ ಪರೀಕ್ಷೆಗೆ ರದ್ದುಗೊಳಿಸಲಾಗಿದೆ.

- Advertisement -
spot_img

Latest News

error: Content is protected !!