Wednesday, June 24, 2026
Homeತಾಜಾ ಸುದ್ದಿಬದುಕಿದ್ದಾಗ ನಿರ್ಮಿಸಿಕೊಂಡಿದ್ದ ಸಮಾಧಿಯಲ್ಲಿ ಮೃತಪಟ್ಟ ಬಳಿಕ ವ್ಯಕ್ತಿಯ ಅಂತ್ಯಸಂಸ್ಕಾರ!

ಬದುಕಿದ್ದಾಗ ನಿರ್ಮಿಸಿಕೊಂಡಿದ್ದ ಸಮಾಧಿಯಲ್ಲಿ ಮೃತಪಟ್ಟ ಬಳಿಕ ವ್ಯಕ್ತಿಯ ಅಂತ್ಯಸಂಸ್ಕಾರ!

- Advertisement -
- Advertisement -

ಚಾಮರಾಜನಗರ: ಬದುಕಿದ್ದಾಗ ತಾನೇ ನಿರ್ಮಿಸಿಕೊಂಡ ಸಮಾಧಿಯಲ್ಲಿ ಮೃತಪಟ್ಟ ಬಳಿಕ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆದಿದೆ.

ಚಾಮರಾಜನಗರ ತಾಲೂಕಿನ ನಂಜೇದೇವನಪುರದಲ್ಲಿ ಪುಟ್ಟನಂಜಪ್ಪ ಎಂಬ ವ್ಯಕ್ತಿ ಬದುಕಿದ್ದಾಗಲೇ ತನ್ನ ಸಮಾಧಿ ನಿರ್ಮಿಸಿಕೊಂಡಿದ್ದರು. ಇಂದು ಪುಟ್ಟನಂಜಪ್ಪ(85) ನಿಧನ ಹೊಂದಿದ್ದರು, ಅದೇ ಸಮಾಧಿಯಲ್ಲಿ ಇಂದು‌ ಅಂತ್ಯ ಸಂಸ್ಕಾರ ನಡೆಸಲಾಗಿದೆ.

30 ವರ್ಷಗಳ ಹಿಂದೆಯೇ ಪುಟ್ಟ ನಂಜಪ್ಪ ಸಮಾಧಿ ನಿರ್ಮಿಸಿಕೊಂಡಿದ್ದರು. ಸಿಮೆಂಟ್ ನಿಂದ ಸಮಾಧಿ ನಿರ್ಮಿಸಿ ಮರಳು ತುಂಬಲಾಗಿತ್ತು. ಇಂದು ಮರಳು ತೆಗೆದು ಸಮಾಧಿಯಲ್ಲಿ ಪುಟ್ಟನಂಜಪ್ಪ ಅಂತ್ಯಸಂಸ್ಕಾರ ನಡೆಸಲಾಗಿದೆ.

ಮೃತ ಪುಟ್ಟನಂಜಪ್ಪಗೆ ಮೂವರು ಮಕ್ಕಳಿದ್ದು, ಮಕ್ಕಳಿಗೆ ತೊಂದರೆಯಾಗಬಾರದೆಂದು ಅಂತ್ಯಸಂಸ್ಕಾರ ಹಾಗು ತಿಥಿಗೆ 1 ಲಕ್ಷ ರೂಪಾಯಿ ಮೀಸಲಿಟ್ಟಿದ್ದರು. ಅಲ್ಲದೇ ಅಂತ್ಯ ಸಂಸ್ಕಾರಕ್ಕೆ ಬೇಕಾದ ಪೂಜಾ ಸಾಮಾಗ್ರಿಯನ್ನೂ ಪುಟ್ಟನಂಜಪ್ಪ ತಾವೇ ತೆಗೆದಿಟ್ಟಿದ್ದರು.

- Advertisement -

Latest News

error: Content is protected !!