Thursday, May 16, 2024
Homeಕರಾವಳಿಮಂಗಳೂರು-ಬೆಂಗಳೂರು ಹೆಚ್ಚುವರಿ ವಿಶೇಷ ರೈಲು ಸೌಲಭ್ಯ: ರೈಲು ಸಂಚಾರ ಸಮಯದ ಕುರಿತ ಮಾಹಿತಿ ಇಲ್ಲಿದೆ ನೋಡಿ

ಮಂಗಳೂರು-ಬೆಂಗಳೂರು ಹೆಚ್ಚುವರಿ ವಿಶೇಷ ರೈಲು ಸೌಲಭ್ಯ: ರೈಲು ಸಂಚಾರ ಸಮಯದ ಕುರಿತ ಮಾಹಿತಿ ಇಲ್ಲಿದೆ ನೋಡಿ

spot_img
- Advertisement -
- Advertisement -

ಬೆಂಗಳೂರು: ಮಂಗಳೂರು-ಬೆಂಗಳೂರಿನಿಂದ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ವಿಶೇಷ ರೈಲು ಸೌಲಭ್ಯವಿದೆ. ಅದೇ ರೀತಿ, ಪ್ರತಿ ಭಾನುವಾರ, ಮಂಗಳವಾರ ಮತ್ತು ಗುರುವಾರ ಬೆಂಗಳೂರು-ಮಂಗಳೂರು ವಿಶೇಷ ರೈಲು ಸೌಲಭ್ಯವಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.

ಕಳೆದ ಹಲವು ದಿನಗಳಿಂದ ಮಳೆ, ಭೂಕುಸಿತ ಇತ್ಯಾದಿಗಳಿಂದ ಮಂಗಳೂರು-ಬೆಂಗಳೂರು ರಸ್ತೆ ಪ್ರಯಾಣ ಆತಂಕವನ್ನು ತಂದಿತ್ತು. ಇದಕ್ಕೆ ಪರಿಹಾರವಾಗಿ ಇತ್ತೀಚೆಗೆ ಮಂಗಳೂರು-ಬೆಂಗಳೂರು ನಡುವೆ ಹೆಚ್ಚುವರಿ ರಾತ್ರಿ ರೈಲನ್ನು ಜುಲೈ 26ರಿಂದ ವಾರಕ್ಕೆ ಮೂರು ದಿನಗಳ ಕಾಲ ಆರಂಭಿಸಲು ರೈಲ್ವೆ ಮಂಡಳಿ ಅನುಮತಿ ನೀಡಿತ್ತು.

ಇನ್ನು ಹಿಂದೂಸ್ತಾನ್‌ ಟೈಮ್ಸ್‌ ರೈಲ್ವೆ ವೆಬ್‌ಸೈಟ್‌ ಪರಿಶೀಲಿಸಿದ್ದು, ವಿಶೇಷ ರೈಲು ಯಾವಾಗ? ಎಷ್ಟು ಗಂಟೆಗೆ? ರೈಲು ಹೊರಡಲಿದೆ ಎಂಬ ಮಾಹಿತಿ ಪಡೆದಿದೆ. ಜುಲೈ 25ರಂದು ಕಣ್ಣೂರು ಎಕ್ಸ್‌ಪ್ರೆಸ್‌ (21:35), ಎಸ್‌ಬಿಸಿ ಎಂಎಕ್ಯು ಎಕ್ಸ್‌ಪ್ರೆಸ್‌ (20:30) ಮಾತ್ರ ಇದ್ದು, ವಿಶೇಷ ರೈಲು ನಾಳೆಯಿಂದ ಪರಿಚಯಿಸಲಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ. ಆದರೆ ರೈಲ್ವೇ ಪ್ರಯಾಣಿಕರು ಗಮನಿಸಬೇಕಾದ ವಿಚಾರವೆಂದರೆ ನಾಳೆ ಮಂಗಳೂರಿನಿಂದ ಬೆಂಗಳೂರಿಗೆ ವಿಶೇಷ ರೈಲು ವ್ಯವಸ್ಥೆ ಇರುವುದಿಲ್ಲ.

ಜುಲೈ 26ರಂದು ಬೆಂಗಳೂರಿನಿಂದ ಮಂಗಳೂರಿಗೆ ವಿಶೇಷ ಟ್ರೇನ್‌ ವ್ಯವಸ್ಥೆಯಿದೆ. ಆದರೆ, ಮಂಗಳೂರಿನಿಂದ ಬೆಂಗಳೂರಿಗೆ ಬರಲು ನಾಳೆ ಯಾವುದೇ ವಿಶೇಷ ಟ್ರೇನ್‌ ಇರುವುದಿಲ್ಲ. ಮಂಗಳೂರಿನಿಂದ ಬೆಂಗಳೂರಿಗೆ ಜುಲೈ 27ರಂದು ಹೆಚ್ಚುವರಿ ಟ್ರೇನ್‌ ವ್ಯವಸ್ಥೆಯಿದ್ದು, ವಿಶೇಷ ಟ್ರೇನ್‌ ನಂಬಿಕೊಂಡು ಪ್ರಯಾಣ ಹೊರಡುವವರು ಯಾವ ದಿನ ಬೆಂಗಳೂರಿನಿಂದ ಮಂಗಳೂರಿಗೆ, ಯಾವ ದಿನ ಮಂಗಳೂರಿನಿಂದ ಬೆಂಗಳೂರಿಗೆ ಟ್ರೇನ್‌ ಇದೆ ಎಂದು ತಿಳಿದುಕೊಂಡು ಮುಂದುವರೆಯುವುದು ಉತ್ತಮ ಎಂದು ರೈಲ್ವೇ ಮಂಡಳಿ ತಿಳಿಸಿದೆ.

- Advertisement -
spot_img

Latest News

error: Content is protected !!