Wednesday, June 26, 2024
Homeತಾಜಾ ಸುದ್ದಿ100 ಅಡಿ ಆಳದ ಬಂಡೆ ಹಳ್ಳಕ್ಕೆ ಬಿದ್ದ ಶಾಲಾ ಬಸ್: ಚಾಲಕನಿಗೆ ಗಂಭೀರ ಗಾಯ

100 ಅಡಿ ಆಳದ ಬಂಡೆ ಹಳ್ಳಕ್ಕೆ ಬಿದ್ದ ಶಾಲಾ ಬಸ್: ಚಾಲಕನಿಗೆ ಗಂಭೀರ ಗಾಯ

spot_img
- Advertisement -
- Advertisement -

ಬೆಂಗಳೂರು: ಬೆಳ್ಳಗಿನ ಜಾವ ಬೊಮ್ಮನಹಳ್ಳಿ ಸಮೀಪದ ಕೂಡ್ಲು ಬಳಿಯಲ್ಲಿ ಶಾಲಾ ಬಸ್ಸೊಂದು ಅಪಘಾತಕ್ಕೀಡಾಗಿ, ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಗುರುವಾರಂದು ನಡೆದಿದೆ. ಹೆಚ್‌ಎಸ್‌ಆರ್ ಲೇಔಟ್‌ನ ಫ್ರೀಡಂ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ಸೇರಿದ ಬಸ್ ಇದಾಗಿದ್ದು, ಬೆಳಗ್ಗೆ ವಿದ್ಯಾರ್ಥಿಗಳನ್ನು ಕರೆತರಲು ಬಸ್ ತೆರಳಿತ್ತು. ಈ ವೇಳೆ ಕೂಡ್ಲು ಬಳಿ ಇದ್ದ ಬಂಡೆ ಹಳ್ಳಕ್ಕೆ ಶಾಲಾ ಬಸ್ ಬಿದ್ದಿದೆ.

ಅದೃಷ್ಟವಶಾತ್ ಘಟನೆ ವೇಳೆಗೆ ಬಸ್‌ ಖಾಲಿಯಿದ್ದು, ಮಕ್ಕಳಿರಲಿಲ್ಲ. ಆದರೆ ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೂಡ್ಲು ಬಳಿಯ ರಸ್ತೆ ಪಕ್ಕ ಇರುವ ಬಂಡೆ ಹಳ್ಳ 100 ಅಡಿಗೂ ಹೆಚ್ಚು ಆಳವಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಹಳ್ಳವನ್ನು ಮುಚ್ಚಿಸಲು ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರು. ಆದರೆ ಈ ಮನವಿಯಿಂದ ಯಾವುದೇ ಪ್ರಯೋಜನವಾಗದೇ ಇರುವ ಕಾರಣದಿಂದ ಇದೀಗ ಸಂಭವಿಸಿರುವ ಅಪಘಾತದಿಂದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!