Wednesday, October 14, 2026
Homeತಾಜಾ ಸುದ್ದಿರಾಜ್ಯ ಸರಕಾರದ ವಿರುದ್ಧ ಜೂ. 28ಕ್ಕೆ ಬಿಜೆಪಿಯಿಂದ ಮತ್ತೆ ಪ್ರತಿಭಟನೆ

ರಾಜ್ಯ ಸರಕಾರದ ವಿರುದ್ಧ ಜೂ. 28ಕ್ಕೆ ಬಿಜೆಪಿಯಿಂದ ಮತ್ತೆ ಪ್ರತಿಭಟನೆ

- Advertisement -
- Advertisement -

ಬೆಂಗಳೂರು: ಬಿಜೆಪಿಯು ಜೂನ್ 28 ಶುಕ್ರವಾರದಂದು ರಾಜ್ಯ ಸರ್ಕಾರದ ವಿರುದ್ದ ಮತ್ತೊಂದು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದು ಈ ಬಾರಿ ವಾಲ್ಮೀಕಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

ಕಳೆದ ವಾರ ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ರಾಜ್ಯವ್ಯಾಪಿ ರಸ್ತೆ ತಡೆ ಹಾಗೂ ಬೆಂಗಳೂರಿನಲ್ಲಿ ಸೈಕಲ್‌ ಜಾಥಾ ನಡೆಸಿದ್ದ ಬಿಜೆಪಿ ಈಗ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ.

ಇನ್ನು ಈ ಪ್ರಕರಣವು ಸಿಎಂ ಸಿದ್ದರಾಮಯ್ಯ ಅವರ ಕಣ್ಣಂಚಿನಲ್ಲೇ ನಡೆದಿದ್ದು, ಇದೊಂದು ಅಂತಾರಾಜ್ಯ ಹಗರಣವಾಗಿರುತ್ತದೆ ಎಂದು ಬಿಜೆಪಿ ಪಕ್ಷವು ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದೆ.

- Advertisement -

Latest News

error: Content is protected !!