Thursday, June 4, 2026
Homeಕರಾವಳಿತಡೆಬೇಲಿಗೆ ಕಾರು ಢಿಕ್ಕಿ

ತಡೆಬೇಲಿಗೆ ಕಾರು ಢಿಕ್ಕಿ

- Advertisement -
- Advertisement -

ಸುಳ್ಯದ ಕುರುಂಜಿಗುಡ್ಡೆ ಒಳಾಂಗಣ ಕ್ರೀಡಾಂಗಣದ ಇನ್‌ಡೋರ್‌ ತಡೆಬೇಲಿಗೆ ಕಾರೊಂದು ಗುದ್ದಿದ ಘಟನೆ ಸಂಭವಿಸಿದೆ.

ಕ್ರೀಡಾಂಗಣದ ಪಕ್ಕದಲ್ಲಿ ನಗರ ಪಂಚಾಯತ್‌ನ ಪಾರ್ಕ್‌ ಇದ್ದು, ಅಲ್ಲಿಗೆ ಮಂಗಳವಾರ ಬೆಳಗ್ಗೆ ಕಾರಿನಲ್ಲಿ ಬಂದ ಯುವಕರು ಕ್ರೀಡಾಂಗಣದ ಎದುರಿನ ಜಾಗದಲ್ಲಿ ಕಾರು ಚಲಾಯಿಸಿದ ವೇಳೆ ನಿಯಂತ್ರಣ ತಪ್ಪಿ ಕಾರು ತಡೆಬೇಲಿಗೆ ಢಿಕ್ಕಿಯಾಗಿದೆ.

ಘಟನೆಯಲ್ಲಿ ತಡೆಬೇಲಿ ಕೆಳಗೆ ಬಿದ್ದಿದ್ದು, ಸ್ಥಳಕ್ಕೆ ನ.ಪಂ. ಮಾಜಿ ಅಧ್ಯಕ್ಷ ವಿನಯ ಕುಮಾರ್‌ ಕಂದಡ್ಕ, ನ.ಪಂ. ಅಧಿಕಾರಿಗಳು ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!