Saturday, April 27, 2024
HomeUncategorizedಮದುವೆಯಲ್ಲೇ‌‌ ಮಾನಸಿಕ‌ ನೆಮ್ಮದಿ‌ ಸಿಗುತ್ತೆ ಅಂತಾ 43 ವರ್ಷದಲ್ಲಿ 53 ಮದುವೆಯಾದ ಮಹಾನುಭಾವ

ಮದುವೆಯಲ್ಲೇ‌‌ ಮಾನಸಿಕ‌ ನೆಮ್ಮದಿ‌ ಸಿಗುತ್ತೆ ಅಂತಾ 43 ವರ್ಷದಲ್ಲಿ 53 ಮದುವೆಯಾದ ಮಹಾನುಭಾವ

spot_img
- Advertisement -
- Advertisement -

ನ್ಯೂನ್ ಡೆಸ್ಕ್; ನಿಜಕ್ಕೂ ಈ‌ ಸುದ್ದಿಯನ್ನು ಓದುವ ನಮ್ಮ ಕರಾವಳಿ‌ ಮಂದಿಗೆ “ಎಂಚೆಂಚಿನ ಪ್ರತಿಭೆಲುಲ್ಲ, ಅವಕಾಶ ಕೊರ್ರೆ ಪೊಡಿಗೆ ಆಪುಂಡು ಮರ್ರೆ” ಅನ್ನೋ ಫೇಮಸ್ ಡೈಲಾಗ್ ನೆನಪಾಗದೇ ಇರದು. ನಾವು ಹೇಳ್ತಾ ಇರೋ ಈತನದ್ದು ಇಂತಹದ್ದೇ‌ ಕಥೆ.

ಅಂದ್ಹಾಗೆ ಈ ಮಹಾನುಭಾವನ ಹೆಸರು ಅಬು ಅಬ್ದುಲ್ಲಾ ಅಂತಾ. ಈತನ ವಯಸ್ಸು 63. ಸೌದಿ ಅರೇಬಿಯಾದವನು. ಸದಾ‌ ಮಾನಸಿಕ ನೆಮ್ಮದಿಗಾಗಿ ಹುಡುಕಾಡುತ್ತಿರುವ ಈತ ಅದಕ್ಕಾಗಿ ಬರೋಬ್ಬರಿ 53 ಮದುವೆಮಾಗಿದ್ದಾನೆ. ಅದು  43 ವರ್ಷಗಳಲ್ಲಿ.

ಆದ್ರೆ ಇದನ್ನೆಲ್ಲಾ ನಾನು ಯಾಕೆ ಮಾಡಿದೆ ಅಂದ್ರೆ ಆತ ಹೇಳೋದು ಏನ್ ಗೊತ್ತಾ?  ‘ನಾನು ವೈಯಕ್ತಿಕ ಸುಖಕ್ಕಾಗಿ ಇಷ್ಟೊಂದು ಮದುವೆಯಾಗಿಲ್ಲ. ನನಗೆ ಭಾವನಾತ್ಮಕ ಸ್ಥಿರತೆ ಮತ್ತು ಸಂತೋಷ ಬೇಕಿತ್ತು. ಹಾಗಾಗಿ ಒಂದಾದರ ಮೇಲೊಂದು ಮದುವೆಯಾದೆ ಅಂತಿದ್ದಾನೆ.

ಇನ್ನು ಇತ್ತೀಚೆಗಷ್ಟೇ ಆತ ಒಂದು ಮದುವೆಯಾಗಿದ್ದಾನೆ. ಅದು ಆತನ ಕೊನೆಯ ಮದುವೆಯಂತೆ. ಪಾಪ ಅಷ್ಟರಲ್ಲಿ ಆತನಿಗೆ ಜ್ಞಾನೋದಯ ಆಗಿರಬೇಕು. ಹಾಗಾಗಿ ನನಗಿನ್ನು ಶಾಂತಿ ಬೇಕು’ ಸಾಕು ಮದುವೆ ಎಂದಿದ್ದಾನೆ.

ಈ ಮಹಾನ್ ಸಾಧಕ 20 ವರ್ಷದವನಿದ್ದಾಗ ತನಗಿಂತ 6 ವರ್ಷ ದೊಡ್ಡವಳನ್ನು  ಮೊದಲ ಮದುವೆಯಾದ. ಮಗುವಾದ ನಂತರ ಸಹಜವಾಗಿ ಸಮಸ್ಯೆಗಳು ಶುರುವಾದವು. ಆಗ 23ನೇ ವಯಸ್ಸಿನಲ್ಲಿ ಮತ್ತೊಂದು ಮದುವೆಯಾದ. ಆದರೆ ಮೊದಲ ಮತ್ತು ಎರಡನೇ ಹೆಂಡತಿ ಮಧ್ಯೆ ಜಗಳ ಶುರುವಾಗುವುದು ಇನ್ನೂ ಸಹಜ ಅಲ್ಲವೆ? ಹತಾಶನಾಗದೆ ಮೂರನೇ ಮದುವೆಯಾದ. ಹೀಗೆ ಒಂದಕ್ಕೆ ಇನ್ನೊಂದು ಪರಿಹಾರದಂತೆ ಅಣ್ಣ ನಿರಂತರವಾಗಿ 53 ಮದುವೆಯಾಗುತ್ತಾ ಹೋಗಿದ್ದಾನೆ. ಆದರೆ ಮದುವೆ ಮೂಲಕವೇ ನೆಮ್ಮದಿ ಕಂಡುಕೊಳ್ಳಲು ಹೋದ ಈತನಿಗೆ ಮದುವೆಯೇ ಶಾಕ್ ಕೊಟ್ಟಿದೆ. ಒಂದರ ಹಿಂದೆ ಒಂದರಂತೆ ಮದುವೆಗಳು ಮುರಿದು ಬಿದ್ದಿವೆ.ಒಂದು ಮದುವೆಯಂತೂ ಮದುವೆಯಾದ ಮೊದಲ ರಾತ್ರಿಯೇ ಮುರಿದು ಬಿದ್ದಿತ್ತಂತೆ.

ಇನ್ನು ಈ ತನಕ ಇವನೊಂದಿಗೆ ಮದುವೆಯಾದ ಮಹಿಳೆಯರೆಲ್ಲರೂ ಸೌದಿ ಅರೇಬಿಯಾ ಮೂಲದವರೇ. ಒಬ್ಬ ಹೆಂಡತಿ ಮಾತ್ರ ವಿದೇಶದವಳು. ಕೆಲಸದ ನಿಮಿತ್ತ ಸೌದಿಗೆ ಬಂದ ಈ ಮಹಿಳೆ, ಯಾವುದೋ ಅಪಾಯದ ಪರಿಸ್ಥಿತಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಈತನೊಂದಿಗೆ ಮದುವೆಯಾಗಿದ್ದಾಳೆ. ‘ಹೌದು, ನನ್ನನ್ನು ರಕ್ಷಿಸಿಕೊಳ್ಳಲೆಂದೇ ಈತನೊಂದಿಗೆ ಮದುವೆಯಾಗಿದ್ದೇನೆ. ಮೂರರಿಂದ ನಾಲ್ಕು ತಿಂಗಳ ತನಕ ಮಾತ್ರ ಇವನೊಂದಿಗೆ ಇರುತ್ತೇನೆ’ ಎಂದಿದ್ದಾಳೆ. ಇದೀಗ 53ಮ ಮದುವೆಯಾಗಿರುವ ಅಬುಗೆ ಮದುವೆಯೇ ಸುಸ್ತು ಅನ್ನಿಸಿಬಿಟ್ಟಿದೆಯಂತೆ. ಮಾನಸಿಕ‌‌ ನೆಮ್ಮದಿಗೆ ಮದುವೆ ಪರಿಹಾರವಲ್ಲ ಅನ್ನೋದು ಅರ್ಥವಾಗಿದೆಯಂತೆ. ಹಾಗಾಗಿ ಮದ್ವೆ ಸಹವಾಸ ಸಾಕು ಅಂತಿದ್ದಾನಂತೆ.

- Advertisement -
spot_img

Latest News

error: Content is protected !!