Thursday, June 4, 2026
Homeತಾಜಾ ಸುದ್ದಿಅ.16ರಂದು ಮಂಡ್ಯಗೆ ಆಗಮಿಸಲಿದ್ದಾರೆ ಯೋಗಿ ಆದಿತ್ಯನಾಥ್

ಅ.16ರಂದು ಮಂಡ್ಯಗೆ ಆಗಮಿಸಲಿದ್ದಾರೆ ಯೋಗಿ ಆದಿತ್ಯನಾಥ್

- Advertisement -
- Advertisement -

ಮಂಡ್ಯ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಅ.16ರಂದು ಮಂಡ್ಯಗೆ ಆಗಮಿಸಲಿದ್ದು, ಕೆ.ಆರ್‌.ಪೇಟೆಯಲ್ಲಿ ನಡೆಯುವ ಮಹಾಕುಂಭಮೇಳದಲ್ಲಿ ಭಾಗಿಯಾಗಲಿದ್ದಾರೆ.

ಕೆ‌.ಆರ್‌. ಪೇಟೆಯ ತ್ರಿವೇಣಿ ಸಂಗಮದಲ್ಲಿ ಅ.13ರಿಂದ ಅ.16 ರ ವರೆಗೆ ಮಹಾಕುಂಭಮೇಳ ನಡೆಯಲಿದೆ. ಮಹಾಕುಂಭಮೇಳಕ್ಕೆ ಯೋಗಿ ಆದಿತ್ಯನಾಥ್‌ ಅವರಿಗೆ ಆಹ್ವಾನ ನೀಡಲಾಗಿದೆ. 

ನಿನ್ನೆ ಲಖನೌನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದ ಕ್ರೀಡಾ ಸಚಿವ ನಾರಾಯಣಗೌಡ‌‌‌ ಅವರು, ಮಹಾಕುಂಭಮೇಳಕ್ಕೆ ಆಹ್ವಾನ ನೀಡಿದ್ದಾರೆ. ಆಹ್ವಾನ‌ ಸ್ವೀಕರಿಸಿರುವ ಯೋಗಿ ಅವರು ಮಹಾಕುಂಭಮೇಳದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಆದಿಚುಂಚನಗಿರಿ, ಧರ್ಮಸ್ಥಳದ ಇತಿಹಾಸ ಹಾಗೂ ನಾಥ ಪರಂಪರೆ ಬಗ್ಗೆ ನಾರಾಯಣಗೌಡರ ಜೊತೆ ಯೋಗಿ ಅವರು ಮಾತನಾಡಿ ತಿಳಿದುಕೊಂಡಿದ್ದಾರೆ. 

- Advertisement -

Latest News

error: Content is protected !!