Wednesday, June 3, 2026
Homeತಾಜಾ ಸುದ್ದಿಸತೀಶ್‌ ಜಾರಕಿಹೊಳಿ ವಾಮಾಚಾರ ಫ್ಯಾಮಿಲಿಯವರು: ಜಗ್ಗೇಶ್

ಸತೀಶ್‌ ಜಾರಕಿಹೊಳಿ ವಾಮಾಚಾರ ಫ್ಯಾಮಿಲಿಯವರು: ಜಗ್ಗೇಶ್

- Advertisement -
- Advertisement -

ಬೆಂಗಳೂರು: ಸತೀಶ್‌ ಜಾರಕಿಹೊಳಿಯವರಿಗೆ ಏನೂ ಗೊತ್ತಿಲ್ಲ. ಯಾಕಂದ್ರೆ ಅವರು ವಾಮಾಚಾರ ಫ್ಯಾಮಿಲಿಯವರು. ಸ್ಮಶಾನ ಪ್ರೀತಿಸುವವರು. ಸ್ಮಶಾನವನ್ನ ಪ್ರೀತಿಸುವವರು ಹಿಂದೂ ಸಂಸ್ಕೃತಿಯನ್ನ ಒಪ್ಪಲ್ಲ. ಅವರು ಮಾಠಮಂತ್ರ ಮಾಯಾಜಾಲ ಮಾಡುವಂತವರು ಎಂದು ಜಗ್ಗೇಶ್‌ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸತೀಶ್‌ ಜಾರಕಿಹೊಳಿ ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನ ಖಂಡಿಸಿದ್ರು. ನಮ್ಮ ಹಿಂದೂಗಳು ಶಾಂತಿಪ್ರಿಯರು ಕ್ಷಮಾಗುಣವುಳ್ಳವರು. ಅವರು ಕ್ಷಮಿಸಿದ್ದಾರೆ ಅಂತ ಪದೇ ಪದೇ ಈ ರೀತಿ ಮಾತನಾಡಲು ಹೋಗಬೇಡಿ. ಅವರು ಎದ್ದುನಿಂತ್ರು ಅಂದ್ರೆ ನಿಮ್ಮ ಹೆಸರು ಹೇಳಲು ಇಲ್ಲದಂತೆ ಮಾಡುತ್ತಾರೆ ಅಂತ ಜಗ್ಗೇಶ್ ಹೇಳಿದರು.

- Advertisement -

Latest News

error: Content is protected !!