Wednesday, August 26, 2026
Homeತಾಜಾ ಸುದ್ದಿಹೊಯ್ಸಳ ಹೆಲ್ತ್ ಕೇರ್‌ನ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ

ಹೊಯ್ಸಳ ಹೆಲ್ತ್ ಕೇರ್‌ನ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ

- Advertisement -
- Advertisement -

ಮೂಡಿಗೆರೆ: ಹೊಯ್ಸಳ ಹೆಲ್ತ್ ಕೇರ್ – ಮೂಡಿಗೆರೆ ಹಾಗೂ ಶ್ರೀ ಕೃಷ್ಣ ಆಸ್ಪತ್ರೆ,ಕಕ್ಕಿಂಜೆ – ಬೆಳ್ತಂಗಡಿ ತಾಲೂಕು,ದ ಕ. ಇವರ ಸಂಯುಕ್ತ ಆಶ್ರಯದಲ್ಲಿ  “ಹೊಯ್ಸಳ ಹೆಲ್ತ್ ಕೇರ್ ನ ವಾರ್ಷಿಕೋತ್ಸವದ ಪ್ರಯುಕ್ತ”  ಉಚಿತ ಆರೋಗ್ಯ ತಪಾಸಣೆ ಶಿಬಿರ ಇಂದು ಹೊಯ್ಸಳ ಹೆಲ್ತ್ ಕೇರ್,ಮೇಗಲ್ ಪೇಟೆ,ಕೆ.ಎಮ್ ರಸ್ತೆ-ಮೂಡಿಗೆರೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಯಶಸ್ವಿನಿ ಅಮಿನ್ ನೆರವೇರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಕೃಷ್ಣ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ.ಮುರಳಿಕೃಷ್ಣ ಇರ್ವತ್ರಾಯ,ಹೊಯ್ಸಳ ಹೆಲ್ತ್ ಕೇರ್ ಮೂಡಿಗೆರೆ ಇದರ ಮ್ಯಾನೆಜಿಂಗ್ ಡೈರೆಕ್ಟರ್ ಡಾ. ಅರ್ಪಿತಾ ಸಿಂಹ,ಶ್ರೀ ಕೃಷ್ಣ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ವಂದನಾ ಎಂ ಇರ್ವತ್ರಾಯ, ಹೊಯ್ಸಳ ಹೆಲ್ತ್ ಕೇರ್ ನ ವೈದ್ಯಾಧಿಕಾರಿಗಳಾದ ಡಾ.ಶಶಿಕುಮಾರ್, ಡಾ.ಗ್ರೀಷ್ಮಾ ಗೌಡ,ಶ್ರೀ ಕೃಷ್ಣ ಆಸ್ಪತ್ರೆಯ ಪಿ.ಆರ್.ಓ ಗಣೇಶ್ ,ಸಿಬ್ಬಂದಿಗಳಾದ ಹೈದರ್ ಅಲಿ ಮೊದಲಾದವರಿದ್ದರು.

ಸುಮಾರು ನೂರಕ್ಕೂ ಅಧಿಕ ಜನರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು.

- Advertisement -

Latest News

error: Content is protected !!