Friday, May 3, 2024
Homeಮನರಂಜನೆಸಾರಾ ಅಲಿ ಖಾನ್ ಅಂದು-ಇಂದು- ವೈರಲ್ ಆಗಿದೆ ಫಿಟ್ನೆಸ್ ವಿಡಿಯೋ

ಸಾರಾ ಅಲಿ ಖಾನ್ ಅಂದು-ಇಂದು- ವೈರಲ್ ಆಗಿದೆ ಫಿಟ್ನೆಸ್ ವಿಡಿಯೋ

spot_img
- Advertisement -
- Advertisement -

ಇಂದು ನಟಿ ಸಾರಾ ಅಲಿ ಖಾನ್‌ ಬಾಲಿವುಡ್‌ನಲ್ಲಿ ಹೀರೋಯಿನ್‌ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ಕೆಲವು ವರ್ಷಗಳ ಹಿಂದೆ ಅವರನ್ನು ನೋಡಿದ ಯಾರೊಬ್ಬರೂ ಈಕೆ ಸಿನಿಮಾ ನಟಿ ಆಗುತ್ತಾಳೆ ಎಂದು ಊಹಿಸಲೂ ಸಾಧ್ಯ ಇರಲಿಲ್ಲ. ಅದಕ್ಕೆ ಕಾರಣ ಆಗಿದ್ದು ಅವರ ದಢೂತಿ ದೇಹ. ನಡೆದಾಡಲು ಕಷ್ಟವಾಗುವಷ್ಟು ಕೊಬ್ಬು ಅವರ ದೇಹದಲ್ಲಿ ಇತ್ತು!

ಆದರೆ ಈಗ ಅವರನ್ನು ನೋಡಿದರೆ ‘ಅರೆರೆ, ಇದು ಅವರೇನಾ?’ ಎಂಬಷ್ಟರಮಟ್ಟಿಗೆ ಬದಲಾಗಿದ್ದಾರೆ. ಸ್ಲಿಮ್‌ ಸುಂದರಿಯಾಗಿ ಮಿಂಚುತ್ತಿದ್ದಾರೆ. ಈ ಬದಲಾವಣೆ ಹೇಗೆ ಸಾಧ್ಯ ಆಯಿತು ಎಂಬುವುದರ ಕುರಿತು ಸಾರಾ ವಿಡಿಯೋವೊಂದನ್ನು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡಿದ್ದು ಸಕತ್ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಸಾರಾ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದು, ಅವಳ ಅಭಿಮಾನಿಗಳ ಮೆಚ್ಚುಗೆಗೂ ಕೂಡ ವಿಡಿಯೋ ಪಾತ್ರವಾಗುತ್ತಿದೆ. ಸಾರಾ ತನ್ನ ಹಲವು ವಿಡಿಯೋಗಳನ್ನು ಜೋಡಿಸಿ ಈ ವಿಡಿಯೋ ಅನ್ನು ತಯಾರಿಸಿದ್ದಾಳೆ. ಈ ವಿಡಿಯೋದಲ್ಲಿ ಸಾರಾ ಜಿಮ್ ನಿಂದ ಹಿಡಿದು ಸ್ವಿಮ್ಮಿಂಗ್ ಪೂಲ್ ವರೆಗೆ ಹಲವು ಮೋಹಕ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. ಹಾಗಾದರೆ ಬನ್ನಿ ನೀವೂ ಕೂಡ ವೀಕ್ಷಿಸಿ ..

https://www.instagram.com/tv/CAz76rxptwX/?utm_source=ig_embed

- Advertisement -
spot_img

Latest News

error: Content is protected !!