Wednesday, May 15, 2024
Homeತಾಜಾ ಸುದ್ದಿಜೈಲಿನಿಂದ ಹೊರ ಬಂದ ಬಳಿಕ ಅಭಿಮಾನಿಗಳಿಗೆ ಮೊದಲ ಸಂದೇಶ ನೀಡಿದ ಸಂಜನಾ:ಅಂದ್ಹಾಗೆ ಫ್ಯಾನ್ಸ್ ಗೆ...

ಜೈಲಿನಿಂದ ಹೊರ ಬಂದ ಬಳಿಕ ಅಭಿಮಾನಿಗಳಿಗೆ ಮೊದಲ ಸಂದೇಶ ನೀಡಿದ ಸಂಜನಾ:ಅಂದ್ಹಾಗೆ ಫ್ಯಾನ್ಸ್ ಗೆ ನಟಿ ಹೇಳಿದ್ದೇನು?

spot_img
- Advertisement -
- Advertisement -

ಬೆಂಗಳೂರು: ಡ್ರಗ್​ ಕೇಸ್​ನಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿ ಜಾಮೀನು ಪಡೆದು ಹೊರ ಬಂದು ತಿಂಗಳಾಗಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಅವರು ಧನ್ಯವಾದ ಹೇಳಿದ್ದಾರೆ.

ಸ್ಯಾಂಡಲ್​ವುಡ್ ಡ್ರಗ್​ ಕೇಸ್​ನಲ್ಲಿ ಸಂಜನಾ ಹೆಸರು ಕೇಳಿ ಬಂದಿತ್ತು. ರಾಗಿಣಿ ದ್ವಿವೇದಿ ಜೊತೆ ಅವರು ಕೂಡ ಜೈಲು ಸೇರಿದ್ದರು. ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದು ಸಂಜನಾ ಬಿಡುಗಡೆ ಆಗಿದ್ದಾರೆ. ಈ ಸಮಯದಲ್ಲಿ ಕಾಳಜಿ ತೋರಿದ ಇನ್​​ಸ್ಟಾಗ್ರಾಂ ಖಾತೆಯ 10 ಲಕ್ಷ ಫಾಲೋವರ್ಸ್ ಗೆ ಸಂಜನಾ ಧನ್ಯವಾದ ಹೇಳಿದ್ದಾರೆ.

ಇನ್​ಬಾಕ್ಸ್​ನಲ್ಲಿ ಮೆಸೇಜ್​ ಮಾಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದ. ನಿಮ್ಮ ಪ್ರತಿ ಸಂದೇಶಗಳನ್ನು ನಾನು ಓದಿದ್ದೇನೆ. ನಿಮ್ಮ ಕಾಳಜಿಗೆ ಧನ್ಯವಾದ. ನನ್ನ ಆರೋಗ್ಯ ಸರಿ ಆದ ನಂತರದಲ್ಲಿ ನಾನು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗುತ್ತೇನೆ. ನಿಮ್ಮ ಪ್ರೀತಿ-ಕಾಳಜಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ ಎಂದಿದ್ದಾರೆ.

- Advertisement -
spot_img

Latest News

error: Content is protected !!