Friday, June 5, 2026
Homeತಾಜಾ ಸುದ್ದಿಕನ್ನಡದ ಖ್ಯಾತ ಹಿರಿಯ ನಟಿಯ ಪುತ್ರ ಕೊರೊನಾಗೆ ಬಲಿ:‌ ಪತಿಯ ಸ್ಥಿತಿ ಚಿಂತಾಜನಕ

ಕನ್ನಡದ ಖ್ಯಾತ ಹಿರಿಯ ನಟಿಯ ಪುತ್ರ ಕೊರೊನಾಗೆ ಬಲಿ:‌ ಪತಿಯ ಸ್ಥಿತಿ ಚಿಂತಾಜನಕ

- Advertisement -
- Advertisement -

ಬೆಂಗಳೂರು:‌ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ದಕ್ಷಿಣ ಭಾರತದ ಹಿರಿಯ ನಟಿ ಕವಿತಾ ಅವರ ಮಗ ಸಾಯಿ ರೂಪ್ ಕೊರೊನಾ ಸೋಂಕಿನಿಂದ ಮೃತ ಪಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಕೊರೊನಾ ವೈರಸ್ʼಗೆ ತುತ್ತಾಗಿದ್ದ ಸಾಯಿ ಅವ್ರು ಇಂದು  ಕೊನೆಯುಸಿರೆಳೆದರು.

ಸಾಯಿ ರೂಪ್ ಆರಂಭದಲ್ಲಿ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದರು. ನಂತ್ರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ, ಅವರನ್ನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಇನ್ನು, ಕವಿತಾ ಅವರ ಪತಿ ದಶತರಾಜ್ ಕೂಡ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಸ್ಥಿತಿ ಗಂಭೀರವಾಗಿದೆ. ಇನ್ನು ಕವಿತಾ ಅವ್ರ ಮಗನ ನಿಧನಕ್ಕೆ ಚಲನಚಿತ್ರೋದ್ಯಮದ ಹಲವಾರು ಜನರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

- Advertisement -

Latest News

error: Content is protected !!