Friday, June 5, 2026
Homeತಾಜಾ ಸುದ್ದಿಕೆ.ಎಸ್. ಈಶ್ವರಪ್ಪ ಅವರು ತಮ್ಮನ್ನು ಜಂಗಲ್ ರಾಜಾ ಎಂದು ಒಪ್ಪಿಕೊಂಡಿದ್ದಾರೆ: ಯು.ಟಿ. ಖಾದರ್ ವ್ಯಂಗ್ಯ

ಕೆ.ಎಸ್. ಈಶ್ವರಪ್ಪ ಅವರು ತಮ್ಮನ್ನು ಜಂಗಲ್ ರಾಜಾ ಎಂದು ಒಪ್ಪಿಕೊಂಡಿದ್ದಾರೆ: ಯು.ಟಿ. ಖಾದರ್ ವ್ಯಂಗ್ಯ

- Advertisement -
- Advertisement -

ಬೆಂಗಳೂರು: ಸಚಿವ ಕೆ.ಎಸ್. ಈಶ್ವರಪ್ಪ ಅವರು ತಮ್ಮನ್ನು ತಾವು ಸಿಂಹ ಎಂದು ಕರೆದುಕೊಂಡಿದ್ದಾರೆ. ಅವರು ಜಂಗಲ್ ರಾಜಾ ಎಂದು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಯು.ಟಿ. ಖಾದರ್ ವ್ಯಂಗ್ಯವಾಡಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ಹಿಜಾಬ್ ವಿಚಾರವಾಗಿ ಕೋರ್ಟ್‌ಗೆ ಹೋಗಿದ್ದ ವಿದ್ಯಾರ್ಥಿನಿಯ ಸಹೋದರನ ಮೇಲೆ ಹಲ್ಲೆ ಮಾಡಿದ್ದಾರೆ. ಹಿಜಾಬ್ ವಿಚಾರವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿಯರ ಮೇಲೆಯೂ ಲಾಠಿ ಬೀಸಲಾಗಿದೆ. ಶಿವಮೊಗ್ಗದಲ್ಲಿ ನಿನ್ನೆ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಯಿದ್ದರೂ ಸಚಿವರ ನೇತೃತ್ವದಲ್ಲಿ ಮೆರವಣಿಗೆ ನಡೆಸಿ, ಕಲ್ಲು ತೂರಾಟ ನಡೆದಿದೆ ಎಂದು ಹೇಳಿದರು. ಪೊಲೀಸರು ರಾಜಕಾರಣಿಗಳ ಒತ್ತಡಕ್ಕೆ ಮಣಿಯಬಾರದು. ಸಂವಿಧಾನಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮ್ಮನ್ನು ತಾವು ಸಿಂಹ ಎಂದು ಕರೆದುಕೊಂಡಿದ್ದಾರೆ. ನಾವು ಮನುಷ್ಯರು, ಅಂಥ ಪ್ರಾಣಿಗಳ ಬಳಿಗೆ ಹೋಗುವುದಿಲ್ಲ. ಅವರು ಜಂಗಲ್ ರಾಜಾ ಎಂದು ಒಪ್ಪಿಕೊಂಡಿದ್ದಾರೆ ಎಂದರು.

- Advertisement -

Latest News

error: Content is protected !!