Friday, April 26, 2024
Homeಕ್ರೀಡೆಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬೆಳಗ್ಗೆ ಕೊರೋನಾ ಪಾಸಿಟಿವ್.. ಸಂಜೆ ನೆಗೆಟಿವ್..!

ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬೆಳಗ್ಗೆ ಕೊರೋನಾ ಪಾಸಿಟಿವ್.. ಸಂಜೆ ನೆಗೆಟಿವ್..!

spot_img
- Advertisement -
- Advertisement -

ನವದೆಹಲಿ: ಥಾಯ್ಲೆಂಡ್ ಓಪನ್ ಬ್ಯಾಟ್ಮಿಂಟನ್ ಟೂರ್ನಿಗೂ ಮುನ್ನಾ ಕೊರೋನಾ ಪರೀಕ್ಷೆಗೆ ಒಳಗಾದಂತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದಿದೆ. ಒಲಿಂಪಿಕ್ ಕಂಚಿನ ಪದಕ ವಿಜೇತೆ ಹಾಗೂ ವಿಶ್ವದ ಮಾಜಿ ನಂಬರ್ 1 ಆಟಗಾರ್ತಿ ಸೈನಾ ನೆಹ್ವಾಲ್ ಮತ್ತು ಮತ್ತೊಬ್ಬ ಸ್ಟಾರ್ ಬ್ಯಾಟ್ಮಿಂಟನ್ ಆಟಗಾರ್ತಿ ಹೆಚ್ ಎಸ್ ಪ್ರಣಯ್ ಅವರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಈ ಬಳಿಕ ಅವರನ್ನು ಮತ್ತೆ ನಾಲ್ಕು ಬಾರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂತಹ ಕೊರೋನಾ ಪರೀಕ್ಷೆಯ ವರದಿಯಲ್ಲಿ ಸೈನಾ ನೆಹ್ವಾಲ್ ಹಾಗೂ ಪ್ರಣಯ್ ಇಬ್ಬರಿಗೂ ಕೊರೋನಾ ವರದಿ ನೆಗೆಟಿವ್ ಎಂಬುದಾಗಿ ದೃಢಪಟ್ಟಿದೆ.

ಈ ಕುರಿತಂತೆ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಷನ್ (ಬಿಡಬ್ಲ್ಯುಎಫ್) ಮತ್ತು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿ.ಎ.ಐ) ಸ್ಪಷ್ಟ ಪಡಿಸಿದ್ದು, ಹೀಗಾಗಿ ಯೋನೆಕ್ಸ್ ಥಾಯ್ಲೆಂಡ್ ಓಪನ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಸೈನಾ ನೆಹ್ವಾಲ್ ಮತ್ತು ಎಚ್ ಎಸ್ ಪ್ರಣಯ್ ಅವರಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.

ಕೊರೊನಾ ಹಿನ್ನಲೆಯಲ್ಲಿ ಕಳೆದ 10 ತಿಂಗಳಿಂದ ಯಾವುದೇ ಪಂದ್ಯಾವಳಿ ನಡೆದಿರಲಿಲ್ಲ. ದೊಡ್ಡ ಬ್ರೇಕ್ ನಂತ್ರ ಸೈನಾ ಥೈಲ್ಯಾಂಡ್ ಪಂದ್ಯಾವಳಿ ಮೂಲಕ ಮೈದಾನಕ್ಕಿಳಿಯಲು ಸಜ್ಜಾಗಿದ್ದರು. ಇದಕ್ಕೂ ಮೊದಲು ಪ್ರೋಟೋಕಾಲ್ ಬಗ್ಗೆ ಸೈನಾ ಸಾಕಷ್ಟು ಟ್ವಿಟ್ ಮಾಡಿದ್ದರು. ಥೈಲ್ಯಾಂಡ್ ನಲ್ಲಿ ತರಬೇತುದಾರರನ್ನು ಭೇಟಿಯಾಗಲು ಅವಕಾಶ ನೀಡ್ತಿರಲಿಲ್ಲ. ಕ್ರೀಡಾ ಸಿಬ್ಬಂದಿ ಭೇಟಿಗೂ ಅವಕಾಶ ನೀಡ್ತಿರಲಿಲ್ಲವೆಂದು ಸೈನಾ ಹೇಳಿದ್ದರು.

ಯೋನೆಕ್ಸ್ ಥೈಲ್ಯಾಂಡ್ ಓಪನ್ ಜನವರಿ 12 ರಿಂದ 17 ರವರೆಗೆ ನಡೆಯಲಿದೆ. ಇದರ ನಂತರ, ಟೊಯೋಟಾ ಥೈಲ್ಯಾಂಡ್ ಓಪನ್ ಜನವರಿ 19 ರಿಂದ 24 ರವರೆಗೆ ನಡೆಯಲಿದೆ. ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ಸ್ ಜನವರಿ 27 ರಿಂದ 31 ರವರೆಗೆ ನಡೆಯಲಿದೆ.

- Advertisement -
spot_img

Latest News

error: Content is protected !!