Saturday, April 20, 2024
Homeಜ್ಯೋತಿಷ್ಯಬುಧವಾರದ ದಿನಭವಿಷ್ಯ: ಹೇಗಿರಲಿದೆ ನಿಮ್ಮ ರಾಶಿಫಲ ? ಯಾವುದು ನಿಮ್ಮ ಈ ದಿನದ ಅದೃಷ್ಟ ಸಂಖ್ಯೆ?

ಬುಧವಾರದ ದಿನಭವಿಷ್ಯ: ಹೇಗಿರಲಿದೆ ನಿಮ್ಮ ರಾಶಿಫಲ ? ಯಾವುದು ನಿಮ್ಮ ಈ ದಿನದ ಅದೃಷ್ಟ ಸಂಖ್ಯೆ?

spot_img
- Advertisement -
- Advertisement -

ನಿತ್ಯ ಪಂಚಾಂಗ:
ಶಾರ್ವರಿನಾಮ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಹೇಮಂತ ಋತು, ಕೃಷ್ಣಪಕ್ಷ, ಅಮಾವಾಸ್ಯೆ, ಬುಧವಾರ, ಜನವರಿ 13,2021. ಪೂರ್ವಾಷಾಢ ನಕ್ಷತ್ರ,
ರಾಹುಕಾಲ: ಬೆಳಿಗ್ಗೆ 12.23ರಿಂದ ಮಧ್ಯಾಹ್ನ 1.46 ರ ತನಕ.
ಸೂರ್ಯೋದಯ: ಬೆಳಿಗ್ಗೆ 6.49. ಸೂರ್ಯಾಸ್ತ: ಸಂಜೆ 5.59.

ಮೇಷ ರಾಶಿ
ಖಾಸಗಿ ನೌಕರರಿಗೆ ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆಯಾಗುವುದು. ಮಡದಿಯೊಂದಿಗೆ ಮನಸ್ತಾಪ ಬೇಡ. ನವಗ್ರಹಾರಾಧನೆ ಮಾಡುವುದು ಒಳಿತು. ವ್ಯಾಪಾರದಲ್ಲಿ ಪ್ರಗತಿ ಇರುವುದು. ವೈವಾಹಿಕ ತೊಂದರೆಗಳು ಪರಿಹಾರವಾಗುವವು. ಸಂಕುಚಿತ ಭಾವನೆ ಅಥವಾ ಸಂದೇಹಗಳಿಂದ ದೂರವಿರಿ. ಮನೆಯಲ್ಲಿ ಸಂತಸದ ವಾತಾವರಣ ಇರುವುದು.
ಶುಭ ಸಂಖ್ಯೆ: 5

ವೃಷಭ ರಾಶಿ
ವೈಯಕ್ತಿಕ ಕೆಲಸಗಳಿಗೆ ಮತ್ತೊಬ್ಬರನ್ನು ಆಶ್ರಯಿಸುವುದು ಸೂಕ್ತವಲ್ಲ. ಗುರು-ಹಿರಿಯರ ಆಶೀರ್ವಾದ ಪಡೆದು ಸ್ವತಂತ್ರ ನಿರ್ಧಾರ ತಳೆಯಿರಿ. ನಿಮ್ಮ ಒಪ್ಪಂದಗಳಿಗೆ ಒಪ್ಪುವ ಪಾಲುದಾರರನ್ನು ಮಾತ್ರ ವ್ಯವಹಾರದಲ್ಲಿ ತೊಡಗಿಸಿಕೊಳ್ಳಿರಿ. ವ್ಯವಹಾರದಲ್ಲಿ ಹಾನಿ ಕಂಡುಬರುವುದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವುದು.
ಶುಭ ಸಂಖ್ಯೆ: 7

ಮಿಥುನ ರಾಶಿ
ಮಡದಿಯ ಭಾವನೆಗಳನ್ನು ಗೌರವಿಸಿರಿ. ಪತ್ರಿಕಾ ರಂಗದ ಉದ್ಯೋಗಿಗಳು ಸಾಕಷ್ಠು ಎಚ್ಚರಿಕೆಯಿಂದ ಇರಬೇಕು. ನಿಶ್ಚಿತ ಗುರಿಯತ್ತ ನಿಮ್ಮ ಕೆಲಸ ಕಾರ್ಯಗಳು ಸಾಗಲಿವೆ. ಅಡ್ಡಿ ಆತಂಕಗಳು ದೂರವಾಗಲಿದ್ದು ಮನಸ್ಸು ನಿರಾಳ ಎನಿಸುವುದು. ನೇಕ ರೀತಿಯ ಲಾಭ ದೊರೆಯುವ ಸಾಧ್ಯತೆ ಇದೆ. ಆದರ್ಶ ವ್ಯಕ್ತಿತ್ವದಿಂದ ಜನ ಮನ್ನಣೆಗೆ ಪಾತ್ರರಾಗುವಿರಿ. ಎಲ್ಲ ಕೆಲಸಗಳೂ ಸಕಾಲದಲ್ಲಿ ಪೂರ್ಣವಾಗುವವು. ಕೌಟುಂಬಿಕ ವಿವಾದ ಕೊನೆಗೊಳ್ಳುವುದು.
ಶುಭ ಸಂಖ್ಯೆ: 6

ಕರ್ಕಾಟಕ ರಾಶಿ
ಜೀವನ ಶೈಲಿಯನ್ನು ಅಲ್ಪ ಬದಲಾಯಿಸಿಕೊಳ್ಳುವುದು ಒಳ್ಳೆಯದು. ಮಕ್ಕಳ ವಿದ್ಯಾಭ್ಯಾಸವೇನಾದರೂ ಹಿಂದೆ ಬಿದ್ದಲ್ಲಿ ಅದಕ್ಕೆ ನಿಮ್ಮ ಅಪರೋಕ್ಷ ಅಲಕ್ಷ್ಯವೇ ಕಾರಣವಾಗುವುದು. ಧನ ಅಪವ್ಯಯವಾಗುವ ಲಕ್ಷಣಗಳಿವೆ ಆದರೆ ಸಣ್ಣ ವ್ಯಾಪಾರಿಗಳಿಗೆ ಉತ್ತಮ ಲಾಭವಾಗುವುದು. ಶ್ರಮಿಕವರ್ಗಕ್ಕೆ ಉನ್ನತಿ ಇರುವುದು. ಕೌಟುಂಬಿಕ ಸಂಬಂಧಗಳು ಫಲಿಸುವವು. ಋಣಪರಿಹಾರವಾಗುವುದು.
ಶುಭ ಸಂಖ್ಯೆ: 9

ಸಿಂಹ ರಾಶಿ
ವ್ಯವಹಾರದಲ್ಲಿ ಎಚ್ಚರಿಕೆ ಅತ್ಯಗತ್ಯ. ಅನಿಸಿಕೆಗಳನ್ನು ಆತ್ಮೀಯರೊಂದಿಗೆ ಮಾತ್ರ ಹಂಚಿಕೊಳ್ಳುವುದು ಸೂಕ್ತ. ಇಂದು ನಿಮ್ಮ ವ್ಯಕ್ತಿತ್ವ ಒಂದು ಸುಗಂಧದಂತೆ ಕೆಲಸ ಮಾಡುತ್ತದೆ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ತಪ್ಪುಗಳನ್ನು ಸಮರ್ಥಿಸುವುದರಿಂದ ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ಅಧಿಕಾರಿಗಳ ಕಿರಿಕಿರಿಗೆ ಮಣಿಯದೇ ಧೈರ್ಯದಿಂದ ಕೆಲಸ ನಿರ್ವಹಿಸುವಿರಿ. ಮತ್ತೊಬ್ಬರ ಮೇಲೆ ಅತಿಯಾದ ವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ.
ಶುಭ ಸಂಖ್ಯೆ: 3

ಕನ್ಯಾ ರಾಶಿ
ಸಾಮಾಜಿಕ ಕೂಟಗಳಲ್ಲಿ ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮನ್ನು ಜನಪ್ರಿಯಗೊಳಿಸುತ್ತದೆ. ನಿಮ್ಮ ಸಂಪೂರ್ಣ ಹಾಗೂ ಪ್ರಶ್ನಾತೀತ ಪ್ರೀತಿ ಒಂದು ಜಾದುವಿನಂಥ ಸೃಜನಶೀಲ ಶಕ್ತಿಯನ್ನು ಹೊಂದಿದೆ. ಕುಟುಂಬದ ಆರೋಗ್ಯದ ದೃಷ್ಟಿಯಿಂದ ಹಣಕಾಸಿನ ಖರ್ಚು. ಸಹನೆಗೆ ತಕ್ಕ ಫಲ ದೊರೆಯುವುದು. ಬಹು ದಿನದ ಕನಸು ನನಸಾಗುವ ಕಾಲವಿದೆ. ಕೋರ್ಟ್​ನಲ್ಲಿದ್ದ ವ್ಯಾಜ್ಯಗಳಲ್ಲಿ ಜಯ ದೊರೆಯುವುದು. ಸಂತಾನಫಲದ ಅಪೇಕ್ಷೆ ಈಡೇರುವುದು. ಆರ್ಥಿಕ ವ್ಯವಹಾರಗಳ ಅದೃಷ್ಟ ಲಾಭತರುವವು.
ಶುಭ ಸಂಖ್ಯೆ: 2

ತುಲಾ ರಾಶಿ
ನೀವು ತುರ್ತು ಅಗತ್ಯದ ಸಂದರ್ಭದಲ್ಲಿ ಬಲುಬೇಗನೆ ಕಾರ್ಯನಿರ್ವಹಿಸುವ ನಿಮ್ಮ ಸಾಮರ್ಥ್ಯಕ್ಕೆ ಮೆಚ್ಚುಗೆ ಪಡೆಯುತ್ತೀರಿ. ನೀವು ಸ್ನೇಹಿತರೊಬ್ಬನೊಂದಿಗೆ ಇಂದು ಸಮಯವನ್ನು ಕಳೆಯಬಹುದು ಆದರೆ ಈ ಸಮಯದಲ್ಲಿ ನೀವು ಆಲ್ಕೊಹಾಲ್ ಸೇವಿಸುವುದನ್ನು ತಪ್ಪಿಸಬೇಕು. ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವುದು. ಎಚ್ಚರಿಕೆವಹಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವುದು. ಗೊಂದಲಕ್ಕೆ ಒಳಗಾಗದೇ ಮುನ್ನುಗ್ಗಿರಿ. ಕೊಟ್ಟಸಾಲ ಪಾವತಿಯಾಗುವುದು.
ಶುಭ ಸಂಖ್ಯೆ: 8

ವೃಶ್ಚಿಕ ರಾಶಿ
ತುಂಬಾ ಸಮಯ ಹಾಳಾಗಬಹುದು. ನಿಮಗೆ ಗೊತ್ತೇ? ನಿಮ್ಮ ಸಂಗಾತಿ ನಿಜವಾಗಿಯೂ ಒಬ್ಬ ದೇವತೆ. ನಂಬಿಕೆಯಿಲ್ಲವೇ? ಇಂದು ನೋಡಿ ಹಾಗೂ ಅನುಭವಿಸಿ. ನಿಮ್ಮ ಪಾಡಿಗೆ ನೀವಿದ್ದರೂ ನಿಮ್ಮನ್ನು ಮಾತನಾಡಿಸಿ ತಪ್ಪು ಹುಡುಕುವ ಮಂದಿಯಿಂದ ಈ ದಿನ ಎಚ್ಚರದಿಂದಿರಿ. ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವುದು. ಮನೋಚಿಂತಿತ ಕಾರ್ಯ ಕೈಗೂಡುವುದು. ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವುದು. ಪರರ ಸಹಾಯದ ಅನಿವಾರ್ಯತೆ ಇರಲಾರದು. ಆರೋಗ್ಯದ ಕಾಳಜಿ ಇರಲಿ.
ಶುಭ ಸಂಖ್ಯೆ: 2

ಧನಸ್ಸು ರಾಶಿ
ಆದಷ್ಟು ಈ ದಿನ ಮೌನವಾಗಿದ್ದು ಗಣಪತಿಯ ಆರಾಧನೆ ಮಾಡಿರಿ. ಹಿರಿಯರ ಆಶೀರ್ವಾದದಿಂದ ಈ ದಿನ ನಿಮ್ಮ ಕಾರ್ಯಗಳು ಕೈಗೂಡುವವು. ಹಾಗಾಗಿ ಹಿರಿಯರ ಸಹಾಯವನ್ನು ಕಡೆಗಣಿಸದಿರಿ. ಕುಟುಂಬ ಕಲಹದಿಂದ ಮನಸ್ಸಿಗೆ ಅಶಾಂತಿ ಉಂಟಾಗುವುದು. ಹಿರಿಯರ ಮಧ್ಯಸ್ಥಿಕೆಯಿಂದ ಕಲಹವು ಶಮನಗೊಳ್ಳುವುದು. ಹಿರಿಯರಿಗೆ ಅನಾರೋಗ್ಯ ಸಂಭವ. ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಉದ್ಯೋಗ ಬದಲಿ ಮಾಡುವದು ಸದ್ಯಕ್ಕೆ ಬೇಡ. ಹಣಕಾಸಿನ ವಿಷಯದಲ್ಲಿ ಬಂಧುಗಳು ಸಹಕಾರ ತೋರುವರು.
ಶುಭ ಸಂಖ್ಯೆ: 4

ಮಕರ ರಾಶಿ
ಪತಿ-ಪತ್ನಿಯರು ಈ ದಿನ ಶಿವನ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿರಿ. ಪರಾಕ್ರಮ ಕೆಲಸಗಳು ಸುಸೂತ್ರವಾಗಿ ನಡೆಯುವುದು. ಆದಾಗ್ಯೂ ನಿಮ್ಮ ಎದುರಾಳಿಗಳು, ಪ್ರತಿಸ್ಪರ್ಧಿಗಳು ತಲೆನೋವಿಗೆ ಕಾರಣರಾಗುತ್ತಾರೆ. ನಿಶ್ಚಿತ ಆರ್ಥಿಕ ಸ್ಥಿತಿ ಇರುವುದರಿಂದ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅಲ್ಪ ಹಾನಿಯ ಸಂಭವವಿದೆ. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಿರಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ.
ಶುಭ ಸಂಖ್ಯೆ: 6

ಕುಂಭ ರಾಶಿ
ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗುವವು. ಆದರೆ ನಿಮ್ಮ ಕಠೋರ ಮಾತು ಇತರೆಯವರನ್ನು ಘಾಸಿಗೊಳಿಸುವುದು. ಇದರಿಂದಾಗಿ ಅವರು ಹಣಕಾಸಿನ ವ್ಯವಹಾರದಲ್ಲಿ ಸಂಶಯ ತಾಳುವರು. ಸಂಗಾತಿಯೊಂದಿಗಿನ ಸಂಬಂಧ ಚೆನ್ನಾಗಿರಲಿಲ್ಲ. ಅನಿರೀಕ್ಷಿತ ಸಂಚಾರ ಒದಗಿಬಂದರೂ ತೃಪ್ತಿದಾಯಕವೆನ್ನಬಹುದು. ವ್ಯಾಪಾರಾದಿ ಉದ್ಯಮಗಳಲ್ಲಿ ಅಪೇಕಿಸಿದಂತೆ ಪ್ರಗತಿ. ಲಾಭ ತೋರಿಬರುತ್ತದೆ. ಹೊಸದಾದ ಆಲೋಚನಾ ಸಿದ್ಧಿ. ವಿಪರೀತ ಖರ್ಚು.
ಶುಭ ಸಂಖ್ಯೆ: 7

ಮೀನಾ ರಾಶಿ
ಕೈ ಧಾರಾಳತನವಿರುವ ನೀವು ಇಂದಿನಿಂದ ಹಣ ಕೂಡಿಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ ನಿಮ್ಮ ಆಪತ್‌ ಕಾಲದಲ್ಲಿ ಯಾರೂ ನಿಮಗೆ ಸಹಾಯ ಮಾಡುವುದಿಲ್ಲ. ನಿಮಗೆ ವಹಿಸಿದ ಕಾರ್ಯವನ್ನು ಶ್ರದ್ಧೆಯಿಂದ ಮಾಡಿರಿ. ಇದರಿಂದ ನಿಮ್ಮ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಧನಾರ್ಜನೆಯ ಮಾರ್ಗವು ಶ್ರೇಷ್ಠ ಮಟ್ಟದಲ್ಲಿದ್ದು, ಐಶ್ವರ್ಯ ಸಮೃದ್ಧಿಯಾಗುತ್ತದೆ. ಸಂಸಾರಿಕ ದೃಷ್ಟಿಯಲ್ಲೂ ಸುಖ, ಸಂಭ್ರಮಗಳಿದ್ದು ತೃಪ್ತಿ ಲಭಿಸಿದರೂ ಶತ್ರುಜನರ ಪೀಡೆ ಅಧಿಕವಾಗುತ್ತದೆ. ಅನಿವಾರ್ಯ ಪ್ರವಾಸ ಸಾಧ್ಯತೆ ಇದೆ.
ಶುಭ ಸಂಖ್ಯೆ: 5

- Advertisement -
spot_img

Latest News

error: Content is protected !!