Thursday, June 4, 2026
HomeUncategorizedನನ್ನ ಅರೋಗ್ಯ ಸಮಸ್ಯೆಗೆ ಕಾಂಗ್ರೆಸ್ ಹಿಂಸೆಯೇ ಕಾರಣ: ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ನನ್ನ ಅರೋಗ್ಯ ಸಮಸ್ಯೆಗೆ ಕಾಂಗ್ರೆಸ್ ಹಿಂಸೆಯೇ ಕಾರಣ: ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

- Advertisement -
- Advertisement -

ಭೋಪಾಲ್‌: ಹಿಂದಿನ ಆಡಳಿತಾರೂಢ ಕಾಂಗ್ರೆಸ್‌ನ ‘ಚಿತ್ರ ಹಿಂಸೆ’ಯಿಂದಾಗಿ ನಾನು ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇನೆ ಎಂದು ಭೋಪಾಲ್‌ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ದೂರಿದ್ದಾರೆ.
ಕಾಂಗ್ರೆಸ್ ಆಡಳಿತಾವಧಿಯಲ್ಲಿ 9 ವರ್ಷಗಳ ಕಾಲ ನನಗೆ ಚಿತ್ರಹಿಂಸೆ ನೀಡಿದ್ದರಿಂದ ಸಾಕಷ್ಟು ಗಾಯಗೊಂಡಿದ್ದೇನೆ. ಒಂದು ಕಣ್ಣು ಕಾಣುವುದಿಲ್ಲ. ನಾನು ಅನುಭವಿಸುತ್ತಿರುವ ದೃಷ್ಟಿದೋಷ, ಮೆದುಳು ಸಮಸ್ಯೆಗೆ ಕಾಂಗ್ರೆಸ್ ಹಿಂಸೆಯೇ ನೇರ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಸಾದ್ವಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮುಖಂಡ ಪಿ.ಸಿ.ಶರ್ಮಾ, ಮಧ್ಯಪ್ರದೇಶದಲ್ಲಿ 15 ವರ್ಷಗಳ ಕಾಲ ಬಿಜೆಪಿ ಆಡಳಿತವಿತ್ತು.
ಅಲ್ಲದೆ, ಕೇಂದ್ರದಲ್ಲಿ ಆರು ವರ್ಷಗಳ ಕಾಲ ಬಿಜೆಪಿ ಸರಕಾರವಿದೆ. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್‌ನಿಂದ ಅವರಿಗೆ ಹೇಗೆ ತೊಂದರೆಯಾಯಿತು ಎಂದು ಪ್ರಶ್ನಿಸಿದ್ದಾರೆ.

- Advertisement -

Latest News

error: Content is protected !!