Tuesday, June 9, 2026
Homeತಾಜಾ ಸುದ್ದಿಶೀಘ್ರದಲ್ಲಿ HDK ಭೂಹಗರಣದ ಸಂಪೂರ್ಣ ದಾಖಲೆ ಬಿಡುಗಡೆ :ಎಸ್.ಆರ್.ಹಿರೇಮಠ

ಶೀಘ್ರದಲ್ಲಿ HDK ಭೂಹಗರಣದ ಸಂಪೂರ್ಣ ದಾಖಲೆ ಬಿಡುಗಡೆ :ಎಸ್.ಆರ್.ಹಿರೇಮಠ

- Advertisement -
- Advertisement -

ರಾಯಚೂರು: ಒಂದು ತಿಂಗಳಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಭೂಹಗರಣ ಸಂಪೂರ್ಣ ಬಿಚ್ಚಿಡುತ್ತೇವೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಮಾಧ್ಯಮದವರ ಮುಂದೆ ತಿಳಿಸಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಎಸ್.ಆರ್.ಹಿರೇಮಠ, ರಾಮನಗರದ ಕೇತಗಾನಹಳ್ಳಿ ಪರಿಶಿಷ್ಟ ಜಾತಿಗೆ ಸೇರಿದ 200 ಎಕರೆ, 65 ಎಕರೆ ಗೋಮಾಳ ಕಬಳಿಕೆ ಬಗ್ಗೆ ಶೀಘ್ರದಲ್ಲೇ ಹಗರಣವನ್ನ ರಾಜ್ಯದ ಜನರ ಮುಂದೆ ದಾಖಲೆ ಸಮೇತ ಸಾಬೀತುಪಡಿಸುತ್ತೇನೆ. ಪ್ರಕರಣ ಲೋಕಾಯುಕ್ತ ಮೆಟ್ಟಿಲು ಏರಿದ್ದರೂ, ಹೈಕೋರ್ಟ್ ಸೂಚಿಸಿದ್ದರು ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದರು.

ಕಾಫಿ ಡೇ ಹಗರಣ ಕುರಿತು ಸಿಬಿಐ ನಿವೃತ್ತ ಡಿಐಜಿ ಅಶೋಕ ಮಲ್ಹೋತ್ರ ವರದಿ ನೀಡಿದ್ದಾರೆ. ಆದರೆ, ವರದಿಯಲ್ಲಿ ಅನೇಕ ಭ್ರಷ್ಟರ ,ಭ್ರಷ್ಟತನದ ಉಲ್ಲೇಖವಿಲ್ಲ. ಡಿಕೆಶಿ, ಮಾಳವಿಕ ಹೆಗಡೆ ಸೇರಿ ಅನೇಕರು ಸಾರ್ವಜನಿಕ ಹಣ ಲೂಟಿ ಮಾಡಿದ್ದಾರೆ. ಹಗರಣದ ಬಗ್ಗೆ ಗಂಭೀರವಾದ ತನಿಖೆ ನಡೆದಿಲ್ಲ. ನಿವೃತ್ತ ರಾಜ್ಯ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಕಾಫೀ ಡೇ ಚೆರ್ಮನ್ ಆಗಿದ್ದಾರೆ. ರಂಗನಾಥ್ ಎಷ್ಟು ಪ್ರಮಾಣಿಕರೋ ಗೊತ್ತಿಲ್ಲ, ತನಿಖೆ ಸರಿಯಾಗಿ ನಡೆದಲ್ಲಿ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದರು.

- Advertisement -

Latest News

error: Content is protected !!