Sunday, May 5, 2024
Homeತಾಜಾ ಸುದ್ದಿಎಸ್ ಪಿ ಬಾಲಸುಬ್ರಮಣ್ಯಂ ಅವರ ಕೊರೊನಾ ವರದಿ ನೆಗೆಟಿವ್:ನಿವಾಸಕ್ಕೆ ಪಾರ್ಥೀವ ಶರೀರದ ರವಾನೆ

ಎಸ್ ಪಿ ಬಾಲಸುಬ್ರಮಣ್ಯಂ ಅವರ ಕೊರೊನಾ ವರದಿ ನೆಗೆಟಿವ್:ನಿವಾಸಕ್ಕೆ ಪಾರ್ಥೀವ ಶರೀರದ ರವಾನೆ

spot_img
- Advertisement -
- Advertisement -

ಚೆನ್ನೈ:ಸತತ 52 ದಿನಗಳ ತಮ್ಮ ಅನಾರೋಗ್ಯದ ವಿರುದ್ಧ ಹೋರಾಟದಲ್ಲಿ ಕೊನೆಗೂ ಎಸ್ ಪಿ ಬಿ ಸೋತು ಹೋಗಿದ್ದಾರೆ. ಚಿಕಿತ್ಸೆ ಫಲಿಸದೇ 74 ವರ್ಷದ ಎಸ್ ಪಿ ಬಾಲಸುಬ್ರಮಣ್ಯಂ ಇಂದು ಮಧ್ಯಾಹ್ನ 1 ಗಂಟೆ 4 ನಿಮಿಷಕ್ಕೆ ನಿಧನರಾಗಿದ್ದಾರೆ.

ಅವರ ನಿಧನದ ಬಳಿಕ ಎಂಜಿಎಂ ಆಸ್ಪತ್ರೆಯ ಮೂಲಗಳು ಅವರ ಕೊರೊನಾ ವರದಿಯನ್ನು ಪ್ರಕಟಿಸಿದ್ದು, ಕೊರೊನಾ ವರದಿ ನೆಗೆಟಿವ್ ಎಂದು ತಿಳಿಸಿದೆ. ಹಾಗಾಗಿ ಅವರ ಪಾರ್ಥೀವ ಶರೀರವನ್ನು ಚೆನ್ನೈನ ನುಗಂಬಾಕಂನಲ್ಲಿರುವಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತಿಗೆ. ಕೊರೊನಾ ಪಾಸಿಟಿವ್ ಬಂದಿದ್ದರೆ ಅವರ ಅಂತ್ಯಕ್ರಿಯೆಯನ್ನು ಕೋವಿಡ್ ಶಿಷ್ಟಾಚಾರದ ಪ್ರಕಾರ ನೆರವೇರಿಸಬೇಕಾಗಿತ್ತು. ಆದರೆ ನೆಗೆಟಿವ್ ಬಂದಿರೋದು ದುಃಖದ ನಡುವೆಯೂ ಅವರ ಕುಟುಂಬಸ್ಥರಿಗೆ ತುಸು ನೆಮ್ಮದಿ ತರಿಸಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಅಂತ್ಯಸಂಸ್ಕಾರದ ಸಮಯ ಇನ್ನೂ ನಿಗದಿಯಾಗಿಲ್ಲ.

- Advertisement -
spot_img

Latest News

error: Content is protected !!