Wednesday, May 15, 2024
Homeತಾಜಾ ಸುದ್ದಿ"ಬಿಹಾರ ವಿಧಾನಸಭೆ 2020 ರ ಚುನಾವಣೆಗಳ ವೇಳಾಪಟ್ಟಿ ಪ್ರಕಟ"

“ಬಿಹಾರ ವಿಧಾನಸಭೆ 2020 ರ ಚುನಾವಣೆಗಳ ವೇಳಾಪಟ್ಟಿ ಪ್ರಕಟ”

spot_img
- Advertisement -
- Advertisement -

ನವದೆಹಲಿ : ಭಾರತ ಚುನಾವಣಾ ಆಯೋಗವು ಬಿಹಾರ ವಿಧಾನಸಭೆ 2020 ರ ಚುನಾವಣೆಗಳ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಅಕ್ಟೋಬರ್ 28 ರಂದು ಮತದಾನ ಆರಂಭವಾಗಲಿದ್ದು ಮೂರು ಹಂತದ ಮತದಾನ ನಡೆಯಲಿದೆ. ನವೆಂಬರ್ 3, ನವೆಂಬರ್ 7 ರಂದು ಬಿಹಾರ ವಿಧಾನಸಭಾ ಚುನಾವಣೆ ಮತದಾನ ನಡೆಯಲಿದ್ದು ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿದು ಬಂದಿದೆ.

ಹೊಸದಾಗಿ 243 ಸದಸ್ಯರ ಸಭೆಯನ್ನು ಆಯ್ಕೆ ಮಾಡುವ ಮತದಾನದಲ್ಲಿ ಕರೋನವೈರಸ್ ಸಾಂಕ್ರಾಮಿಕದ ದೃಷ್ಟಿಯಿಂದ ಪ್ರಕ್ರಿಯೆಯ ಉದ್ದಕ್ಕೂ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.”ಸಾಮಾಜಿಕ ಅಂತರವನ್ನ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ ಮತ್ತು ಪ್ರತಿಯೊಬ್ಬರೂ ಮತದಾನ ಕೇಂದ್ರಗಳಲ್ಲಿ ಮುಖಗವಸುಗಳನ್ನು ಧರಿಸಬೇಕಾಗುತ್ತದೆ. ಹೆಚ್ಚಿನ ತಾಪಮಾನ ಇರುವವರು ಮತದಾನ ಪ್ರಕ್ರಿಯೆಯ ಕೊನೆಯ ಒಂದು ಗಂಟೆಯಲ್ಲಿ ಮತ ಚಲಾಯಿಸಬೇಕಾಗುತ್ತದೆ ಮತ್ತು ಬೂತ್‌ನಲ್ಲಿ ಕಡಿಮೆ ಮತದಾರರು ಇರುತ್ತಾರೆ ಎಂದು ಇಸಿಯ ಮಾರ್ಗಸೂಚಿಗಳು ಪ್ರಕಟಣೆಯಲ್ಲಿ ತಿಳಿಸಿವೆ.

- Advertisement -
spot_img

Latest News

error: Content is protected !!