Sunday, October 18, 2026
Homeಕರಾವಳಿಉಡುಪಿದಸರಾ ವೇಳೆ ಖಾಸಗಿ ಬಸ್ ಗಳಿಂದ ದುಬಾರಿ ದರ ವಸೂಲಿ ದೂರು ಹಿನ್ನೆಲೆ: ಉಡುಪಿಯಲ್ಲಿ ಆರ್...

ದಸರಾ ವೇಳೆ ಖಾಸಗಿ ಬಸ್ ಗಳಿಂದ ದುಬಾರಿ ದರ ವಸೂಲಿ ದೂರು ಹಿನ್ನೆಲೆ: ಉಡುಪಿಯಲ್ಲಿ ಆರ್ ಟಿಓ ಅಧಿಕಾರಿಗಳಿಂದ ತಪಾಸಣೆ

- Advertisement -
- Advertisement -

ಉಡುಪಿ: ದಸರಾ ಹಬ್ಬದ ಹಿನ್ನೆಲೆಯಲ್ಲಿ ಖಾಸಗಿ ಬಸ್ ಗಳಿಂದ ದುಬಾರಿ ದರ ವಸೂಲಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಆರ್ ಟಿಓ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ಉಡುಪಿ ಸರ್ವಿಸ್ ಬಸ್‌ ನಿಲ್ದಾಣದಲ್ಲಿ ಆರ್ ಟಿಓ ಅಧಿಕಾರಿಗಳಿಂದ ಖಾಸಗಿ ಬಸ್ ಗಳು ಮತ್ತು ಖಾಸಗಿ ಪ್ರವಾಸಿ ವಾಹನಗಳ‌ ತಪಾಸಣೆ ನಡೆದಿದೆ. ದೂರ ಪ್ರಯಾಣದ ಬಸ್ ಗಳ ದಾಖಲೆಗಳನ್ನೂ ಅಧಿಕಾರಿಗಳು ಪರೀಶೀಲಿಸಿದ್ದು, ಉಡುಪಿಯಲ್ಲಿ ಆರ್ ಟಿಓ ಇನ್ಸ್‌ಪೆಕ್ಟರ್ ಸಂತೋಷ್ ಶೆಟ್ಟಿ‌ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ.

ಖಾಸಗಿ ಬಸ್ ಗಳಿಂದ ಹೆಚ್ಚುವರಿ ದರ ವಸೂಲಿ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆದಿದೆ. ಪ್ರಯಾಣಿಕರಿಂದ ಅಧಿಕ ದರ ವಸೂಲಿ ಮಾಡಿದರೆ ಖಾಸಗಿ ಬಸ್ ಗಳ ಪರವಾನಗಿ ರದ್ದು ಮಾಡುವುದಾಗಿ ಎರಡು ದಿನಗಳ ಹಿಂದಷ್ಟೇ ಸಾರಿಗೆ ಸಚಿವ ಬಿ. ಶ್ರೀರಾಮುಲು ಖಾಸಗಿ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರು.

- Advertisement -

Latest News

error: Content is protected !!