ಬೆಳ್ತಂಗಡಿ:ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಲೊನಿಗಳ ರಸ್ತೆ ಅಭಿವೃದ್ಧಿಗೆ ರೂ.75.00 ಲಕ್ಷ ಅನುದಾನ ಮಂಜೂರುಗೊಳಿಸಲಾಗಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ
* ಬಜಿರೆ ಗ್ರಾಮದ ಪರ್ಮಾಣು ಕ್ರಾಸ್ ನಿಂದ ಗೋಳಿಯಂಡಿ ಪರಿಶಿಷ್ಟ ಜಾತಿ ಕಾಲೊನಿ ಅಭಿವೃದ್ಧಿಗೆ ರೂ.25.00 ಲಕ್ಷ,
* ನಾರಾವಿ ಗ್ರಾಮದ ನೂಜೋಡಿ ಪರಿಶಿಷ್ಟ ಪಂಗಡ ಕಾಲೊನಿ ರಸ್ತೆ ಅಭಿವೃದ್ಧಿಗೆ ರೂ.25.00 ಲಕ್ಷ,
* ಮಚ್ಚಿನ ಗ್ರಾಮದ ಕುಕ್ಕಿಲ ಪರಿಶಿಷ್ಟ ಪಂಗಡ ಕಾಲೊನಿ ರಸ್ತೆ ಅಭಿವೃದ್ಧಿಗೆ ರೂ.10.00 ಲಕ್ಷ,
* ಮಚ್ಚಿನ ಗ್ರಾಮದ ಬದನೋಡಿ ಪರಿಶಿಷ್ಟ ಪಂಗಡ ಕಾಲೊನಿ ರಸ್ತೆ ಅಭಿವೃದ್ಧಿಗೆ ರೂ.8.00 ಲಕ್ಷ,
* ಮಚ್ಚಿನ ಗ್ರಾಮದ ನೇರೋಳ್ ಪಲ್ಕೆ ಪರಿಶಿಷ್ಟ ಪಂಗಡ ಕಾಲೊನಿ ರಸ್ತೆ ಅಭಿವೃದ್ಧಿಗೆ ರೂ.7.00 ಲಕ್ಷ
ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿಗಳನ್ನು ಕೆ.ಆರ್ ಐ.ಡಿ.ಎಲ್ ಸಂಸ್ಥೆ ಮುಖಾಂತರ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.


