Thursday, October 1, 2026
Homeಕರಾವಳಿಮಂಗಳೂರುಮಂಗಳೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಭೂಮಿ ಒದಗಿಸುವಂತೆ ಮುಡಾಕ್ಕೆ ಕೆಎಸ್ ಸಿಎ ಪತ್ರ

ಮಂಗಳೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಭೂಮಿ ಒದಗಿಸುವಂತೆ ಮುಡಾಕ್ಕೆ ಕೆಎಸ್ ಸಿಎ ಪತ್ರ

- Advertisement -
- Advertisement -

ಮಂಗಳೂರು: ಮಂಗಳೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುವ ಸಂಬಂಧವಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದೆ.

ಕ್ರಿಕೆಟ್ ಕ್ರೀಡಾಂಗಣ ಮತ್ತು ಮೂಲ ಸೌಕರ್ಯಗಳ ನಿರ್ಮಾಣಕ್ಕಾಗಿ ಐವತ್ತು ಎಕರೆ ಸರ್ಕಾರಿ ಜಾಗವನ್ನು ಖರೀದಿ ಅಥವಾ ಐವತ್ತು ವರ್ಷಗಳ ಅವಧಿಗೆ ಲೀಸ್ ರೂಪದಲ್ಲಿ ಒದಗಿಸುವಂತೆ ಕೆಎಸ್ ಸಿಎ ಪತ್ರದಲ್ಲಿ ಮನವಿ ಮಾಡಿದೆ.

ಭೂಮಿ ಒದಗಿಸುವ ಸಂಬಂಧ ಕೆಎಸ್ ಸಿಎ ಅಧ್ಯಕ್ಷ ಬಿ.ಕೆ. ವೆಂಕಟೇಶ ಪ್ರಸಾದ್ ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರಿಗೆ ಪತ್ರ ಇಂದು ಪತ್ರ ಬರೆದಿದ್ದಾರೆ.

ಅಲ್ಲದೇ ಮಂಗಳೂರಿನಲ್ಲಿ ಸ್ಟೇಡಿಯಂ ನಿರ್ಮಾಣ ಸಂಬಂಧ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸಂಪೂರ್ಣ ಸಹಕಾರವನ್ನೂ ಕೆಎಸ್ ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಪತ್ರದಲ್ಲಿ ಕೋರಿದ್ದಾರೆ.

- Advertisement -

Latest News

error: Content is protected !!