Monday, April 29, 2024
Homeಕರಾವಳಿಮಂಗಳೂರು: ಕೋವಿಡ್ ನಿಂದ ಮೃತಪಟ್ಟವರಿಗೆ ರಾಜ್ಯ ಸರಕಾರವು ಘೋಷಿಸಿರುವ 1 ಲಕ್ಷ ಪರಿಹಾರ ಧನ ವಿತರಣೆ

ಮಂಗಳೂರು: ಕೋವಿಡ್ ನಿಂದ ಮೃತಪಟ್ಟವರಿಗೆ ರಾಜ್ಯ ಸರಕಾರವು ಘೋಷಿಸಿರುವ 1 ಲಕ್ಷ ಪರಿಹಾರ ಧನ ವಿತರಣೆ

spot_img
- Advertisement -
- Advertisement -

ಮಂಗಳೂರು: ಕೋವಿಡ್ ಸೋಂಕಿನಿಂದ ಮೃತಪಟ್ಟವರಿಗೆ ರಾಜ್ಯ ಸರಕಾರವು ಘೋಷಿಸಿರುವ 1 ಲಕ್ಷ ಪರಿಹಾರ ಧನವನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಅಳಪೆ ಉತ್ತರ ವಾರ್ಡಿನ ಕುಟುಂಬಕ್ಕೆ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಅವರು, ಮಂಗಳೂರು ನಗರ ದಕ್ಷಿಣ ವಿಧಾನಸಭಾ‌ ವ್ಯಾಪ್ತಿಗೆ ಸಂಬಂಧಿಸಿದಂತೆ ಕೋವಿಡ್ ಮಹಾಮಾರಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ರಾಜ್ಯ ಸರಕಾರವು ಘೋಷಿಸಿರುವ 1 ಲಕ್ಷ ರೂಪಾಯಿ ಪರಿಹಾರಧನದ ಚೆಕ್ ವಿತರಿಸಲಾಯಿತು. ಮೊದಲ‌ ಹಂತದಲ್ಲಿ ಕೆಲವು ಕುಟುಂಬಗಳಿಗೆ ಪರಿಹಾರ ಧನ ಬಂದಿದೆ. ಇನ್ನುಳಿದ ಕುಟುಂಬದ ಸದಸ್ಯರಿಗೂ ಕೂಡ ಪರಿಹಾರ ಧನ ನೀಡಲಾಗುವುದು ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ರೂಪಶ್ರೀ ಪೂಜಾರಿ,ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಪಾಲಿಕೆ ಸದಸ್ಯರುಗಳಾದ ಜಗದೀಶ್ ಶೆಟ್ಟಿ ಬೋಳೂರು, ಗಣೇಶ್ ಕುಲಾಲ್, ಜಯಾನಂದ ಅಂಚನ್, ಜಯಲಕ್ಷ್ಮಿ ಶೆಟ್ಟಿ, ಭರತ್ ಸೂಟರ್ ಪೇಟೆ, ಸಂಧ್ಯಾ ಮೋಹನ್ ಆಚಾರ್, ವೀಣಾ ಮಂಗಲ, ಚಂದ್ರಾವತಿ ವಿಶ್ವನಾಥ್, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ರೂಪಾ ಡಿ ಬಂಗೇರ, ಅಜಯ್ ಕುಲಶೇಖರ, ಕಿರಣ್ ರೈ ಎಕ್ಕೂರು, ಲಲ್ಲೇಶ್ ಅತ್ತಾವರ,ಮೋಹನ್ ಪೂಜಾರಿ, ಚರಿತ್ ಪೂಜಾರಿ, ಮೋಹನ್ ಆಚಾರ್, ಚಂದ್ರಶೇಖರ ಬಜಾಲ್, ಅಮರ್, ಅಜಿತ್ ಡಿ.ಸಿಲ್ವ ಮುಂತಾದವರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!