Monday, June 8, 2026
Homeಅಪರಾಧಉಳ್ಳಾಲ: ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿ- ಕಾಮುಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು..!

ಉಳ್ಳಾಲ: ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿ- ಕಾಮುಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು..!

- Advertisement -
- Advertisement -

ಉಳ್ಳಾಲ: ಕಳೆದ ಶನಿವಾರ ತಲಪಾಡಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಕಾಮುಕನನ್ನು ಸಾರ್ವಜನಿಕರು ಹಿಡಿದು ಆತಿಥ್ಯ ನೀಡಿದ್ದು ಆರೋಪಿಯನ್ನು ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಬಂಧಿತ ಆರೋಪಿ ಕಾಸರಗೋಡು ಜಿಲ್ಲೆಯ ಮಂಜೇಶ್ವರ ನಿವಾಸಿ ಮುಸ್ತಾಫ(18)ಎಂದು ತಿಳಿದು ಬಂದಿದೆ.

ಆರೋಪಿ ಕಳೆದ ಶನಿವಾರ ತನ್ನ ಸ್ಕೂಟರಲ್ಲಿ ತಲಪಾಡಿಯ ದೇವಿಪುರಕ್ಕೆ ತೆರಳುವ ಒಳರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಸಿಸಿಟಿವಿ ಆಧಾರದಲ್ಲಿ ಆರೋಪಿಯ ಚಹರೆ ಪತ್ತೆ ಹಚ್ಚಿದ ಸ್ಥಳೀಯರು ಆತನ ಮತ್ತೆ ಬರುವಿಕೆಗಾಗಿ ಕಾದು ಕುಳಿತಿದ್ದರು. ಇಂದು ಆರೋಪಿ ತನ್ನ ಸ್ಕೂಟರಲ್ಲಿ ದೇವಿಪುರ ಒಳರಸ್ತೆಯಿಂದ ಬಂದಿದ್ದು ತಲಪಾಡಿ ಶ್ರೀರಾಮ ಭಜನಾ ಮಂದಿರದ ಬಳಿ ಸ್ಥಳೀಯರು ತಡೆದಿದ್ದಾರೆ.

ಕಾಮುಕ ಮುಸ್ತಫನಿಗೆ ಸಾರ್ವಜನಿಕರು ಆತಿಥ್ಯ ನೀಡಿ ಉಳ್ಳಾಲ ಪೊಲೀಸರ ವಶಕ್ಕೆ ನೀಡಿದ್ದಾರೆ. ತಲಪಾಡಿ ದೇವಿಪುರದ ಒಳ ರಸ್ತೆಗಳನ್ನೀಗ ಕಾಮುಕರು ತಮ್ಮ ತೀಟೆ ತೀರಿಸಲು ಬಳಸಿ ಕೊಳ್ಳುತ್ತಿದ್ದು, ಕಳೆದ ತಿಂಗಳಲ್ಲಿ ಅಪ್ರಾಪ್ತ ಶಾಲಾ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಕೆ.ಸಿ. ರೋಡಿನ ಕಾಮುಕನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದರು.

- Advertisement -

Latest News

error: Content is protected !!