Sunday, May 19, 2024
Homeಕರಾವಳಿಮಹಿಳಾ ಸಬಲೀಕರಣ ಉತ್ತೇಜಿಸಲು ‘ಮಂಗಳೂರು ಬೈಕರ್ನಿ’ ತಂಡದಿಂದ ಮಹಿಳಾ ಬೈಕ್ ಪ್ರವಾಸ ಆರಂಭ !

ಮಹಿಳಾ ಸಬಲೀಕರಣ ಉತ್ತೇಜಿಸಲು ‘ಮಂಗಳೂರು ಬೈಕರ್ನಿ’ ತಂಡದಿಂದ ಮಹಿಳಾ ಬೈಕ್ ಪ್ರವಾಸ ಆರಂಭ !

spot_img
- Advertisement -
- Advertisement -

ಮಂಗಳೂರು: ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ್ ಅವರು ಸರ್ಕ್ಯೂಟ್ ಹೌಸ್‌ನಲ್ಲಿ ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ‘ಮಂಗಳೂರು ಬೈಕರ್ನಿ’ ಕ್ಲಬ್ ವತಿಯಿಂದ ರನ್ ಆಫ್ ಕಚ್‌ ಬೈಕ್ ಪ್ರವಾಸಕ್ಕೆ ಚಾಲನೆ ನೀಡಿದರು.

ಮಂಗಳೂರು ಬೈಕರ್ನಿ ಕ್ಲಬ್ ಅನ್ನು 2015 ರಲ್ಲಿ ಕೃತಿ ಉಚ್ಚಿಲ್ ಅವರು ಪ್ರಾರಂಭಿಸಿದರು, ನಂತರ ಪೂಜಾ ಜೈನ್, ದಿವ್ಯಾ ಪೂಜಾರಿ ಮತ್ತು ಅಪೂರ್ವ ಜೈನ್ ಸೇರಿಕೊಂಡರು.

ಮುಂದಿನ 11 ದಿನಗಳಲ್ಲಿ 3,600 ಕಿಲೋಮೀಟರ್‌ಗಳನ್ನು ಕ್ರಮಿಸಲು ನಾಲ್ವರು ಹುಡುಗಿಯರು ಮಂಗಳೂರಿನಿಂದ ಕಚ್‌ಗೆ ಪ್ರಯಾಣ ಆರಂಭಿಸಿದ್ದಾರೆ, ಬಹುಶಃ ಡಿಸೆಂಬರ್ 29 ಅಥವಾ 30 ರಂದು ಕಚ್ ತಲುಪಬಹುದು. ತಂಡವು ದಿನಕ್ಕೆ ಕನಿಷ್ಠ 500 ರಿಂದ 600 ಕಿಲೋಮೀಟರ್ ಕ್ರಮಿಸಲು ಯೋಜಿಸಿದೆ.

ಕೃತಿ, ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಮಂಗಳೂರು ಬೈಕರ್ನಿ ಕ್ಲಬ್‌ನ ಸಂಸ್ಥಾಪಕಿ. ಇದು ಭಾರತದ ಏಕೈಕ ಮಹಿಳಾ ಬೈಕಿಂಗ್ ಕ್ಲಬ್ ಆಗಿದೆ. ‘ದೇವಿಕಾ ಸೀರೆಸ್’ ಜವಳಿ ಅಂಗಡಿಯ ಮಾಲಕಿ ಪೂಜಾ ಜೈನ್ ಕೂಡ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ. ಕರಾಟೆಯನ್ನೂ ಕಲಿಸುತ್ತಾರೆ. ದಿವ್ಯಾ ಪೂಜಾರಿ ವೈದ್ಯಕೀಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಉತ್ಸಾಹಿ ಬೈಕ್ ಸವಾರರಾಗಿದ್ದಾರೆ. ಅಪೂರ್ವ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, 6 ವರ್ಷದ ಬಾಲಕನ ತಾಯಿ.

ಹಾಗೇ ಕೀರ್ತಿ ಪ್ರವಾಸವನ್ನು ಇಷ್ಟಪಡುತ್ತಾರೆ ಮತ್ತು ಪೂಜಾ ಜೈನ್ ಮತ್ತು ದಿವ್ಯಾ ಪೂಜಾರಿ ಅವರೊಂದಿಗೆ ದಕ್ಷಿಣ ಭಾರತದ ಹಲವಾರು ಸ್ಥಳಗಳಿಗೆ ಪ್ರಯಾಣಿಸಿದ್ದಾರೆ. ಅಪೂರ್ವಾ ಅವರು ಸಣ್ಣ ದೂರದ ಸ್ಥಳಗಳಿಗೆ ಪ್ರವಾಸ ಮಾಡಿದ್ದಾರೆ ಮತ್ತು ಇದು 3,600 ಕಿಲೋಮೀಟರ್‌ಗಳನ್ನು ಕ್ರಮಿಸುವ ಇವರ ಮೊದಲ ಅನುಭವವಾಗಿದೆ.

- Advertisement -
spot_img

Latest News

error: Content is protected !!