Friday, July 17, 2026
Homeಕರಾವಳಿಉಡುಪಿಕಾರ್ಕಳ; ರೌಡಿ ಶೀಟರ್ ನಿಂದ ವ್ಯಕ್ತಿ ಮೇಲೆ ಹಲ್ಲೆ ಆರೋಪ

ಕಾರ್ಕಳ; ರೌಡಿ ಶೀಟರ್ ನಿಂದ ವ್ಯಕ್ತಿ ಮೇಲೆ ಹಲ್ಲೆ ಆರೋಪ

- Advertisement -
- Advertisement -

ಕಾರ್ಕಳ: ರೌಡಿ ಶೀಟರ್ ಒಬ್ಬರು ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ಆರೋಪ ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಬೈಲೂರಿನಲ್ಲಿ ಕೇಳಿ ಬಂದಿದೆ.  

ನಿಲೇಶ್ ಎಂಬವರು ಬೈಲೂರು ರಾಜಪುರ ಸೊಸೈಟಿಯ ಎದುರುಗಡೆ ಸ್ನೇಹಿತರಾದ ರಾಜೇಂದ್ರ ಹಾಗೂ ಬದ್ರುದ್ದೀನ್ ರೊಂದಿಗೆ ಮಾತನಾಡುತ್ತಿದ್ದ ಸಂದರ್ಭ ಬೈಲೂರಿನ ಗಣೇಶ ಎಂಬಾತ ಕಾರಿನಲ್ಲಿ ಬಂದು ತನಗೆ ಅವಾಚ್ಯ ಶಬ್ದದಿಂದ ಬೈದು ಹಲ್ಲೆ ಮಾಡಿರುವುದಾಗಿ ನಿಲೇಶ್ ಅವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ನೀಲೇಶ್ ನೀಡಿದ ದೂರಿನಲ್ಲಿ ಗಣೇಶ್ ನನ್ನ  ಕೈಯನ್ನು ಹಿಡಿದು ತಿರುಚಿದ್ದು, ಇದರಿಂದ ಮೂಳೆ ಮುರಿತವಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರು ಹಲ್ಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!