Saturday, June 13, 2026
Homeಕರಾವಳಿಮಂಗಳೂರು; ಪೊಲೀಸರ ಮೇಲೆ ಮಚ್ಚು ಬೀಸಿದ ನಟೋರಿಯಸ್ ರೌಡಿ ಅಂದರ್

ಮಂಗಳೂರು; ಪೊಲೀಸರ ಮೇಲೆ ಮಚ್ಚು ಬೀಸಿದ ನಟೋರಿಯಸ್ ರೌಡಿ ಅಂದರ್

- Advertisement -
- Advertisement -

ಮಂಗಳೂರು; ಬಂಧಿಸಲು ತೆರಳಿದ ಪೊಲೀಸರ ಮೇಲೆ ಮಚ್ಚು ಬೀಸಿದ ನಟೋರಿಯಸ್ ರೌಡಿಯನ್ನು ಪೊಲೀಸರು ಬಂಧಿಸಿರುವ ಘಟನೆ ತಲಪಾಡಿಯಲ್ಲಿ ನಡೆದಿದೆ. ದಾವೂದ್ ಬಂಧಿತ ಆರೋಪಿ.

ಕೇರಳ ಗಡಿಭಾಗ ತಲಪಾಡಿ ದೇವಿಪುರ ಎಂಬಲ್ಲಿ‌ ನಿನ್ನೆ ಸಂಜೆ ಘಟನೆ ನಡೆದಿದೆ. ಮತ್ತೊಂದು ತಂಡದ ಮೇಲೆ ದಾವೂದ್ ಸಂಚು ನಡೆಸುತ್ತಿದ್ದಾನೆ ಎಂಬ ಮಾಹಿತಿ ಪಡೆದು ಪೊಲೀಸರು ಆತನ ಬಂಧನಕ್ಕೆ ತೆರಳಿದ್ದರು. ಈ ವೇಳೆ, ಮಚ್ಚಿನಿಂದ ದಾಳಿ ನಡೆಸಿದ್ದು ಘಟನೆಯಲ್ಲಿ ಸಿಸಿಬಿ‌ ಎಸ್ಐ ನರೇಂದ್ರ ಮತ್ತು ಇನ್ಬೊಬ್ಬ ಎಎಸ್ಐಗೆ ಗಾಯವಾಗಿದೆ.

ದಾವೂದ್ ಟಾರ್ಗೆಟ್ ಗ್ಯಾಂಗ್ ಲೀಡರ್ ಇಲಿಯಾಸ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಲ್ಲದೆ, ಉಳ್ಳಾಲದಲ್ಲಿ ಹಲವು ಕೊಲೆ, ಕೊಲೆಯತ್ನ, ವಸೂಲಿ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ‌ ಮಚ್ಚಿನಿಂದ ಹಲ್ಲೆ ನಡೆಸಲು ಯತ್ನಿಸಿದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದಾವೂದ್ ವಿರುದ್ಧ ಪ್ರಕರಣ ದಾಖಲಾಗಿದೆ..

- Advertisement -

Latest News

error: Content is protected !!