ಕಡಬ: ಪೇಟೆಗೆ ಹೋಗಿ ಬರೋದಾಗಿ ಹೇಳಿ ಮನೆಯಿಂದ ಹೋದ ವ್ಯಕ್ತಿ ನಾಪತ್ತೆಯಿಗರುವ ಘಟನೆ ಕಡಬ ತಾಲೂಕು ಕೊಯಿಲ ಗ್ರಾಮದ ವಳಕಮ್ಮದ ಗುಂಡಿಜೆ ಎಂಬಲ್ಲಿ ನಡೆದಿದೆ. ಕಡಬ ತಾಲೂಕು ಕೊಯಿಲ ಗ್ರಾಮದ ವಳಕಮ್ಮದ ಗುಂಡಿಜೆ ನಿವಾಸಿ ರಾಮ ಯಾನೆ ಹೊನ್ನಪ್ಪ ಗೌಡ( 82) ನಾಪತ್ತೆಯಾದ ವ್ಯಕ್ತಿ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊನ್ನಪ್ಪ ಗೌಡ ನ.21 ರಂದು ಮುಂಜಾನೆ ಮನೆಯಿಂದ ಹೊರಟು ಉಪ್ಪಿನಂಗಡಿ ಪೇಟೆಗೆ ಹೋಗುವುದಾಗಿ ತಿಳಿಸಿ ಹೋದವರು ಉಪ್ಪಿನಂಗಡಿಗೂ ಹೋಗದೇ ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ. ಆಗಾಗ ಉಪ್ಪಿನಂಗಡಿಗೆ ಹೋಗಿ ಮಧ್ಯಾಹ್ನದ ವೇಳೆಗೆ ಆಟೋದಲ್ಲಿ ಮನೆಗೆ ಹಿಂತಿರುಗುತ್ತಿದ್ದವರು ಗುರುವಾರ ಹೋದವರು ಮನೆಗೆ ವಾಪಾಸ್ಸು ಬಂದಿಲ್ಲ. ಇನ್ನು ಅವರು ಆರೋಗ್ಯವಾಗಿದ್ದು ಸ್ವಲ್ಪ ಕಿವುಡುತನವಿತ್ತು ಎಂದು ಮನೆಯವರು ತಿಳಿಸಿದ್ದಾರೆ.
ಕಪ್ಪು ಮೈ ಬಣ್ಣ ಹೊಂದಿರುವ ಅವರು ಎತ್ತರದ ಮೈಕಟ್ಟು ಹೊಂದಿರುತ್ತಾರೆ ಮನೆ ಬಿಟ್ಟು ಹೋಗುವಾಗ ಬಿಳಿಮುಂಡು ಹಾಗೂ ಆಕಾಶ ನೀಲಿ ಬಣ್ಣದ ಅಂಗಿ ಧರಿಸಿದ್ದರು, ಆದುದರಿಂದ ಕಾಣೆಯಾದ ತನ್ನ ತಂದೆಯನ್ನು ಪತ್ತೆ ಹಚ್ಚಿ ಕೊಡುವಂತೆ ಮಗ ಗಿರಿಧರ ಗೌಡ ಎಂಬವರು ಕಡಬ ಠಾಣೆಗೆ ದೂರು ನೀಡಿದ್ದಾರೆ