Friday, June 5, 2026
Homeತಾಜಾ ಸುದ್ದಿಮರಳಿ ಕಾಂಗ್ರೆಸ್ಸಿಗೆ ಬರಲು ಸಿದ್ಧವಾಗುತ್ತಿರುವ ಮಾಜಿ ಸಚಿವ ರೋಷನ್ ಬೇಗ್?

ಮರಳಿ ಕಾಂಗ್ರೆಸ್ಸಿಗೆ ಬರಲು ಸಿದ್ಧವಾಗುತ್ತಿರುವ ಮಾಜಿ ಸಚಿವ ರೋಷನ್ ಬೇಗ್?

- Advertisement -
- Advertisement -

ಬೆಂಗಳೂರು: ಮಾಜಿ ಸಚಿವ, ಮಾಜಿ ಕಾಂಗ್ರೆಸ್ಸಿಗ ರೋಷನ್ ಬೇಗ್ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳುವ ಪ್ರಯತ್ನ ಆರಂಭಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ವಿರುದ್ಧ ಕಿಡಿಕಾರಿದ್ದ ರೋಷನ್ ಬೇಗ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ನಂತರ ಬಿಜೆಪಿ ಸೇರುವ ಪ್ರಯತ್ನವನ್ನು ಮಾಡಿದ್ದರು. ಅದೇ ಸಂದರ್ಭದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಜೊತೆ ಗುರ್ತಿಸಿಕೊಂಡಿದ್ದರು.

ಆದರೆ ಐಎಂಎ ಹರಗರಣದಲ್ಲಿ ಬೇಗ್ ಹೆಸರು ತಳಕು ಹಾಕಿಕೊಂಡಿದ್ದರಿಂದ ಬಿಜೆಪಿ ರೋಷನ್ ಬೇಗ್ ಅವರನ್ನು ಸೇರಿಸಿಕೊಂಡಿರಲಿಲ್ಲ. ಜೊತೆಗೆ ಉಪ ಚುನಾವಣೆಯಲ್ಲಿ ಶಿವಾಜಿನಗರದಿಂದ ಬಿಜೆಪಿ ಟಿಕೆಟ್ ಕೂಡ ನಿರಾಕರಿಸಿತ್ತು . ಹೀಗಾಗಿ ಮಾಜಿ ಸಚಿವ ರೋಷನ್ ಬೇಗ್ ಅತಂತ್ರರಾಗಿದ್ದಾರೆ.

- Advertisement -

Latest News

error: Content is protected !!