ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕೈ ಕುಲುಕಬಾರದು, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವ ವೇಳೆ ಮಾಸ್ಕ್ ಹಾಕಬೇಕು. ಆಗಾಗ ಕೈಗಳನ್ನು ಸ್ಯಾನಿಟೈಜರ್ ನಲ್ಲಿ ತೊಳೆಯಬೇಕೆಂದು ಸಲಹೆ ನೀಡಲಾಗಿದೆ. ಈ ಎಲ್ಲದರ ಮಧ್ಯೆ ಕೊರೊನಾ ಸಮಯದಲ್ಲಿ ಸೆಕ್ಸ್ ಎಷ್ಟು ಸೂಕ್ತ ಎಂಬ ಪ್ರಶ್ನೆ ಎದ್ದಿದೆ.
ಸಂಭೋಗ ಮಾನವ ಅಗತ್ಯತೆಗಳಲ್ಲಿ ಒಂದು. ಇದೊಂದು ನೈಸರ್ಗಿಕ ಕ್ರಿಯೆ. ಸೆಕ್ಸ್ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಒತ್ತಡದ ಮನಸ್ಸನ್ನು ಶಾಂತಗೊಳಿಸುತ್ತದೆ. ಆದರೆ ಈ ವೈರಸ್ ಸೋಂಕಿಗೆ ಒಳಗಾದವರೊಂದಿಗೆ ಸಂಭೋಗ ಬೆಳೆಸುವುದು ಅಪಾಯದಲ್ಲಿ ಅಪಾಯ.
ಸೋಂಕಿತರ ಜೊತೆ ಸಂಭೋಗ ಬೆಳೆಸುವ ಬದಲು ದೂರವಿರುವುದು ಉತ್ತಮ. ಕೋವಿಡ್ 19 ರ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸಲು 2 ರಿಂದ 14 ದಿನಗಳು ತೆಗೆದುಕೊಳ್ಳಬಹುದು. ವಿದೇಶದಿಂದ ಬಂದಿದ್ದರೆ ಅಥವಾ ಕೊರೊನಾ ಸೋಂಕಿನ ಲಕ್ಷಣಗಳು ಅವ್ರಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಸಂಭೋಗದಿಂದ ದೂರವಿರಬೇಕು. ಈ ಸೋಂಕು ದೇಹದಲ್ಲಿ ದ್ರವದ ಮೂಲಕ ಹರಡುತ್ತದೆ. ಪುರುಷರ ವೀರ್ಯ ಅಥವಾ ಮಹಿಳೆಯರ ಯೋನಿ ದ್ರವದಿಂದ ಹರಡಬಹುದು. ಹಾಗಾಗಿ ಪಾಲುದಾರ ಸೋಂಕಿಗೊಳಗಾಗಿದ್ದಾರೆ ಎಂಬ ಅನುಮಾನವಿದ್ರೆ ನೀವು ದೂರವಿರಿ.
ಜ್ವರ, ಕೆಮ್ಮು, ಉಸಿರಾಟದ ತೊಂದರೆ ಅಥವಾ ಮೂಗು ಸೋರುತ್ತಿದ್ದರೂ ಸಂಭೋಗ ಬೆಳೆಸದಿರುವುದು ಒಳ್ಳೆಯದು. ಸೂಕ್ತ ಚಿಕಿತ್ಸೆ ನಂತ್ರವೂ ಎರಡು ವಾರ ಸಂಭೋಗ ಬೆಳೆಸಬೇಡಿ.