ಕೊರೊನಾ ವೈರಸ್ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ಲಾಕ್ ಡೌನ್ ಮಧ್ಯೆಯೂ ಕೆಲವರು ದೇಶ ಸೇವೆ ಮಾಡ್ತಿದ್ದಾರೆ. ಪೊಲೀಸ್, ವೈದ್ಯರ ತಂಡ, ನರ್ಸ್ ಜೊತೆ ಬ್ಯಾಂಕ್ ಕೂಡ ತೆರೆದಿದೆ. ಬ್ಯಾಂಕ್ ನೌಕರರು ಕೂಡ ತಮ್ಮ ಜೀವವನ್ನು ಆಪತ್ತಿಗೆ ತಳ್ಳಿ ಕೆಲಸ ಮಾಡ್ತಿದ್ದಾರೆ. ಈ ನೌಕರರಿಗೆ ಬ್ಯಾಂಕ್ ಖುಷಿ ಸುದ್ದಿ ನೀಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡಾ ನೌಕರರಿಗೆ ಹೆಚ್ಚುವರಿ ವೇತನ ನೀಡುವುದಾಗಿ ಹೇಳಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ನೈರ್ಮಲ್ಯ ಕಾಪಾಡಿಕೊಳ್ಳಲು ಬ್ಯಾಂಕ್ ಆಫ್ ಬರೋಡಾ ತನ್ನ ಪ್ರತಿ ಬ್ಯಾಂಕಿಂಗ್ ನೌಕರರಿಗೆ 2,000 ರೂಪಾಯಿ ನೀಡ್ತಿದೆ. ಬ್ಯಾಂಕ್ ನೌಕರರಿಗೆ ಹೆಚ್ಚುವರಿ ವೇತನ ನೀಡುವುದಾಗಿ SBI ಘೋಷಿಸಿದೆ.
ಲಾಕ್ ಡೌನ್ ಸಮಯದಲ್ಲಿ ಕೆಲಸ ಮಾಡುವ ತನ್ನ ಉದ್ಯೋಗಿಗಳಿಗೆ ಎಸ್‌ಬಿಐ ಹೆಚ್ಚುವರಿ ವೇತನವನ್ನು ನೀಡಲಿದೆ. ಮಾರ್ಚ್ 23 ರಿಂದ ಏಪ್ರಿಲ್ 14 ರವರೆಗೆ ಕೆಲಸ ಮಾಡುವವರಿಗೆ ಹೆಚ್ಚುವರಿ ವೇತನ ಸಿಗಲಿದೆ. ಇದರಲ್ಲಿ ಎಸ್‌ಬಿಐನ ಪ್ರತಿಯೊಂದು ಶಾಖೆಯಲ್ಲಿ ಕೆಲಸ ಮಾಡುವ ಸಿಪಿಸಿಗಳು, ಸಿಎಸಿಗಳು, ಖಜಾನೆ ಕಾರ್ಯಾಚರಣೆ, ಜಾಗತಿಕ ಮಾರುಕಟ್ಟೆಗಳು, ಜಿಐಟಿಸಿ ಮತ್ತು ಐಟಿ ಸೇವೆಗಳ ಜನರನ್ನು ಸೇರಿಸಿಕೊಳ್ಳಲಾಗಿದೆ.