Wednesday, October 14, 2026
Homeಕರಾವಳಿಉಪ್ಪಿನಂಗಡಿ: ಅಡಿಕೆ ವ್ಯಾಪಾರಿಗೆ ಚೂರಿ ಇರಿದು 4 ಲಕ್ಷ ರೂ. ದರೋಡೆ

ಉಪ್ಪಿನಂಗಡಿ: ಅಡಿಕೆ ವ್ಯಾಪಾರಿಗೆ ಚೂರಿ ಇರಿದು 4 ಲಕ್ಷ ರೂ. ದರೋಡೆ

- Advertisement -
- Advertisement -

ಉಪ್ಪಿನಂಗಡಿ : ಅಡಿಕೆ ವ್ಯಾಪಾರಿಗೆ ಚೂರಿ ಇರಿದು ನಾಲ್ಕು ಲಕ್ಷ ರೂಪಾಯಿ ದರೋಡೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಪೆರ್ನೆಯಲ್ಲಿ ನಡೆದಿದೆ.

ಅಡಿಕೆ ವ್ಯಾಪಾರಿ ದೀಪಕ್ ಶೆಟ್ಟಿ ಅಡಿಕೆ ಮಾರಿ ನಾಲ್ಕು ಲಕ್ಷ ರೂ. ದುಡ್ಡಿನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ  ಇನ್ನೊಂದು ಬೈಕಿನಲ್ಲಿ ಬಂದ ಇಬ್ಬರು  ದೀಪಕ್ ಶೆಟ್ಟಿ ಅವರಿಗೆ  ಬೆನ್ನು ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ಹಣ ಲೂಟಿ ಮಾಡಿದ್ದಾರೆ.

ದೀಪಕ್ ಶೆಟ್ಟಿ ಕೃಷಿಕರಿಂದ ಅಡಿಕೆ ಖರೀದಿಸಿ ವ್ಯಾಪಾರ ಮಾಡುತ್ತಿದ್ದರು. ಇಂದು ಅಡಿಕೆ ಅಂಗಡಿ ಬಂದ್ ಮಾಡಿ ಮನೆಗೆ ಹೋಗುವಾಗ ಪೆರ್ನೆಯ ಒಳರಸ್ತೆಯಲ್ಲಿ ಅಪರಿಚಿತರು ದಾಳಿ ಮಾಡಿದ್ದಾರೆ. ತೀವ್ರ ಗಾಯಗೊಂಡ ದೀಪಕ್ ಶೆಟ್ಟಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!