Friday, April 26, 2024
Homeಕ್ರೀಡೆರಸ್ತೆ ಸುರಕ್ಷತಾ ಜಾಗೃತಿಗಾಗಿ ಕ್ರಿಕೆಟ್: ದಶಕದ ಬಳಿಕ ಸಚಿನ್, ಸೆಹ್ವಾಗ್ ಅಬ್ಬರಕ್ಕೆ ಸುಲಭ ತುತ್ತಾದ...

ರಸ್ತೆ ಸುರಕ್ಷತಾ ಜಾಗೃತಿಗಾಗಿ ಕ್ರಿಕೆಟ್: ದಶಕದ ಬಳಿಕ ಸಚಿನ್, ಸೆಹ್ವಾಗ್ ಅಬ್ಬರಕ್ಕೆ ಸುಲಭ ತುತ್ತಾದ ಬಾಂಗ್ಲಾ

spot_img
- Advertisement -
- Advertisement -

ನವದೆಹಲಿ: ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2021 ಭಾಗವಾಗಿ ಶುಕ್ರವಾರ ರಾಯ್ಪುರದ ಶಹೀದ್ ವೀರನಾರಾಯಣ್ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ಬಾಂಗ್ಲಾದೇಶ ಲೆಜೆಂಡ್ಸ್ ವಿರುದ್ಧ 10 ವಿಕೆಟ್‌ಗಳ ಜಯ ದಾಖಲಿಸಿದೆ.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 19.4 ಓವರ್‌ಗಳಲ್ಲಿ 109 ರನ್‌ಗಳಿಗೆ ಸರ್ವಪತನ ಕಂಡಿತು. ಬಾಂಗ್ಲಾದ ಆರಂಭಿಕ ಬ್ಯಾಟ್ಸಮನ್ ನಜೀಮುದ್ದೀನ್ 33 ಎಸೆತಗಳಲ್ಲಿ 49 ರನ್ ಗಳಿಸಿ ಹೆಚ್ಚು ಸ್ಕೋರ್ ಮಾಡಿದರೆ, ಜಾವೇದ್ ಒಮರ್ ಮತ್ತು ರೇನ್ ಸಲೇಹ್ ಇಬ್ಬರೂ ಮಾತ್ರ ತಲಾ 12 ರನ್ ಗಳಿಸಿದರು, ಉಳಿದವರು 7 ರನ್‌ಗಳಿಗಿಂತ ಹೆಚ್ಚು ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ.

ಭಾರತದ ಪರ ಬೌಲಿಂಗ್ ನಲ್ಲಿ ಜ್ಞಾನ್ ಓಜಾ, ಯುವರಾಜ್ ಸಿಂಗ್ ಮತ್ತು ವಿನಯ್ ಕುಮಾರ್ ತಲಾ 2 ವಿಕೆಟ್ ಕಬಳಿಸಿದರೆ, ಮನ್‌ಪ್ರೀತ್ ಗೋನಿ ಮತ್ತು ಯೂಸುಫ್ ಪಠಾಣ್ ಕೂಡ ತಲಾ 1 ವಿಕೆಟ್ ಪಡೆದರು.

ಇಂಡಿಯಾ ಲೆಜೆಂಡ್ಸ್ ಪರವಾಗಿ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಮುರಿಯದ ಆರಂಭಿಕ ಜೊತೆಯಾಟವನ್ನು 110 ಎಸೆತಗಳ ಗುರಿಯನ್ನು ಬೆನ್ನಟ್ಟಲು 59 ಎಸೆತಗಳು ಬಾಕಿ ಇರುವಂತಿಯೇ ತಲುಪಿತು. ಸೆಹ್ವಾಗ್ 35 ಎಸೆತಗಳಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 80 ರನ್ ಗಳಿಸಿದರೆ, ತೆಂಡೂಲ್ಕರ್ 26 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ 33 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು:
ಬಾಂಗ್ಲಾದೇಶ ಲೆಜೆಂಡ್ಸ್‌: 19.4 ಓವರ್‌ಗಳಲ್ಲಿ 109
(ನಝೀಮುದ್ದೀನ್ 49, ಆರ್. ವಿನಯಕುಮಾರ್ 25ಕ್ಕೆ2, ಪ್ರಗ್ಯಾನ್ ಓಜಾ 12ಕ್ಕೆ2, ಯುವರಾಜ್ ಸಿಂಗ್ 15ಕ್ಕೆ2)

ಇಂಡಿಯಾ ಲೆಜೆಂಡ್ಸ್‌: 10.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 114
(ವೀರೇಂದ್ರ ಸೆಹ್ವಾಗ್ ಔಟಾಗದೆ 80, ಸಚಿನ್ ತೆಂಡೂಲ್ಕರ್ ಔಟಾಗದೆ 33)
ಫಲಿತಾಂಶ: ಇಂಡಿಯಾ ಲೆಜೆಂಡ್ಸ್‌ಗೆ 10 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ವೀರೇಂದ್ರ ಸೆಹ್ವಾಗ್.

- Advertisement -
spot_img

Latest News

error: Content is protected !!