Thursday, July 16, 2026
Homeಕರಾವಳಿಬಂಟ್ವಾಳದಲ್ಲಿ ಪತಿಯನ್ನೇ ಕತ್ತಿಯಿಂದ ಕಡಿದು ಕೊಂದ ಪತ್ನಿ

ಬಂಟ್ವಾಳದಲ್ಲಿ ಪತಿಯನ್ನೇ ಕತ್ತಿಯಿಂದ ಕಡಿದು ಕೊಂದ ಪತ್ನಿ

- Advertisement -
- Advertisement -

ಬಂಟ್ವಾಳ:  ಕುಡಿದು ಗಲಾಟೆ ಮಾಡಿತ್ತಿದ್ದ ಪತಿಯನ್ನು ಪತ್ನಿಯೇ ಕತ್ತಿಯಿಂದ ಕಡಿದು ಕೊಲೆ ಮಾಡಿರುವ  ಘಟನೆ ಬಂಟ್ವಾಳ ತಾಲೂಕಿನ ನಾವೂರಿನಲ್ಲಿ ನಡೆದಿದೆ.

ನಾವೂರಿನ ಸೂರ ಕ್ವಾಟ್ರಸ್ ನಿವಾಸಿ ಶೇಷಪ್ಪ(60) ಕೊಲೆಯಾದ ದುರ್ದೈವಿ. ಅವರ ಪತ್ನಿ ಉಮಾವತಿ(52) ಕೊಲೆ ಮಾಡಿದ ಆರೋಪಿ. ಇದೀಗ ಪೊಲೀಸರು ಉಮಾವತಿ ಅವರನ್ನು ಬಂಧಿಸಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಶೇಷಪ್ಪ ಮಾರ್ಚ್ 3 ರಂದು ಕುಡಿದು ಬಂದು ಎಂದಿನಂತೆ ಪತ್ನಿ ಉಮಾವತಿ ಜೊತೆ ಜಗಳ ಮಾಡಿದ್ದಾರೆ. ಈ ವೇಳೆ ಗಲಾಟೆ ಅತಿರೇಕಕ್ಕೆ ಹೋಗಿ ಉಮಾವತಿ ಪತಿಯ ಹಣೆಗೆ ಕತ್ತಿಯಿಂದ ಕಡಿದಿದ್ದಾರೆ. ಗಾಯವಾದ್ರೂ ವೈದ್ಯರ ಬಳಿ ಹೋಗದೇ ಶೇಷಪ್ಪ ಅವರು ಮನೆಯಲ್ಲಿಯೇ ಉಳಿದಿದ್ದರು, ಅಲ್ಲದೇ ತೀವ್ರ ರಕ್ತಸ್ರಾವದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ನಿನ್ನೆ ಮಲಗಿದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ.

ಇನ್ನು ಕೊಲೆ ಆರೋಪದಡಿ ಪತ್ನಿ ಉಮಾವತಿ ಅವರನ್ನುವಶಕ್ಕೆ ಪಡೆದಿರುವ ಬಂಟ್ವಾಳ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!