Monday, May 6, 2024
Homeಉದ್ಯಮರಿಲಯನ್ಸ್‌ ಇಂಡಸ್ಟ್ರೀಜ್‌ ಈಗ ಸಾಲ ಮುಕ್ತ: ಮುಕೇಶ್‌ ಅಂಬಾನಿ‌ ಘೋಷಣೆ

ರಿಲಯನ್ಸ್‌ ಇಂಡಸ್ಟ್ರೀಜ್‌ ಈಗ ಸಾಲ ಮುಕ್ತ: ಮುಕೇಶ್‌ ಅಂಬಾನಿ‌ ಘೋಷಣೆ

spot_img
- Advertisement -
- Advertisement -

ನವದೆಹಲಿ: ತೈಲ ಸಂಸ್ಕರಣೆ, ಟೆಲಿಕಾಂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ರಿಲಯನ್ಸ್‌ ಇಂಡಸ್ಟ್ರೀಜ್‌ ಈಗ ಸಾಲ ಮುಕ್ತವಾಗಿದೆ ಎಂದು ಕಂಪನಿಯ ಮುಖ್ಯಸ್ಥ ಮುಕೇಶ್‌ ಅಂಬಾನಿ ಘೋಷಿಸಿದ್ದಾರೆ.

‘ಕಳೆದ ಮಾರ್ಚ್‌ 31ಕ್ಕೆ ಕಂಪನಿಯ ಸಾಲ ₹ 1,61,035 ಕೋಟಿ ಇತ್ತು. ಕಳೆದ ಎರಡು ತಿಂಗಳ ಅವಧಿಯಲ್ಲಿ ಜಾಗತಿಕ ಹೂಡಿಕೆದಾರರು ದಾಖಲೆಯ ₹ 1.69 ಕೋಟಿ ಬಂಡವಾಳ ತೊಡಗಿಸಿದ್ದರಿಂದ ಕಂಪನಿ ಈಗ ಋಣಮುಕ್ತವಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಮುಂದಿನ ವರ್ಷದ ಮಾರ್ಚ್‌ 31ರ ಒಳಗಾಗಿ ಕಂಪನಿಯನ್ನು ಸಾಲಮುಕ್ತ ಮಾಡಲಾಗುವುದು ಎಂದು ಷೇರುದಾರರಿಗೆ ಭರವಸೆ ನೀಡಿದ್ದೆ. ಈ ಗಡುವಿನೊಳಗಾಗಿ ನಾನು ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇನೆ’ ಎಂದೂ ಮುಕೇಶ್‌ ತಿಳಿಸಿದ್ದಾರೆ.

ರಿಲಯನ್ಸ್‌ನ ಅಂಗಸಂಸ್ಥೆಯಾಗಿರುವ ಜಿಯೊ ಪ್ಲಾಟ್‌ಫಾರ್ಮ್ಸ್‌ನ ಕಾಲುಭಾಗ ಷೇರುಗಳನ್ನು ಮಾರಾಟ ಮಾಡುವ ಮೂಲಕ ಕಂಪನಿ ₹ 1.15 ಲಕ್ಷ ಕೋಟಿ ಸಂಗ್ರಹಿಸಿದೆ. ಕಳೆದ 58 ದಿನಗಳ ಅವಧಿಯಲ್ಲಿ ಹಕ್ಕಿನ ಷೇರುಗಳ ಮಾರಾಟದಿಂದ ₹ 53,124.20 ಕೋಟಿ ಸಂಗ್ರಹಿಸಿದೆ.

- Advertisement -
spot_img

Latest News

error: Content is protected !!