Friday, June 27, 2025
Homeತಾಜಾ ಸುದ್ದಿಲಾಕ್‌ ಡೌನ್-4: ಏನಿರುತ್ತೆ.. ಏನಿರಲ್ಲ.? ಇಲ್ಲಿದೆ ಸಂಪೂರ್ಣ ಚಿತ್ರಣ..

ಲಾಕ್‌ ಡೌನ್-4: ಏನಿರುತ್ತೆ.. ಏನಿರಲ್ಲ.? ಇಲ್ಲಿದೆ ಸಂಪೂರ್ಣ ಚಿತ್ರಣ..

spot_img
- Advertisement -
- Advertisement -

ನವದೆಹಲಿ: ಕೇಂದ್ರ ಸರ್ಕಾರದಿಂದ ಲಾಕ್ಡೌನ್ 4.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಮೇ 31 ರವರೆಗೂ ಲಾಕ್ ಡೌನ್ ಮುಂದುವರೆಯಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳಿಗೆ ಜವಾಬ್ದಾರಿ ನೀಡಿ ಗೈಡ್ ಲೈನ್ ಬಿಡುಗಡೆ ಮಾಡಲಾಗಿದೆ.

ಏನು ಇರುವುದಿಲ್ಲ

  • ಶಾಲಾ-ಕಾಲೇಜು, ತರಬೇತಿ ಕೇಂದ್ರ, ಕೋಚಿಂಗ್ ಸೆಂಟರ್, ಮೆಟ್ರೋ ಸಂಚಾರ ಇರುವುದಿಲ್ಲ.
  • ಹೋಟೆಲ್ ಸರ್ವೀಸ್, ರೆಸ್ಟೋರೆಂಟ್, ಚಿತ್ರಮಂದಿರ ಬಂದ್ ಮುಂದುವರೆಯಲಿದೆ.
  • ವಿಮಾನ ಯಾನ ಈ ಹಿಂದಿನಂತೆಯೇ ಬಂದ್ ಆಗಲಿದೆ.
  • ಲಾಡ್ಜ್ ಕೂಡ ಬಂದ್ ಆಗಲಿವೆ. ಕೊರೋನಾ ಕರ್ತವ್ಯಕ್ಕೆ ನಿರತರಾದವರು ಮತ್ತು ಕ್ವಾರಂಟೈನ್ ವ್ಯವಸ್ಥೆ ಹೊರತುಪಡಿಸಿ ಲಾಡ್ಜ್ ಗಳಿಗೆ ಅನುಮತಿ ಇರುವುದಿಲ್ಲ.
  • ಹೋಟೆಲ್ ಗಳಲ್ಲಿ ಪಾರ್ಸೆಲ್ ಮತ್ತು ಹೋಮ್ ಡೆಲಿವರಿಗೆ ಅವಕಾಶ ನೀಡಲಾಗಿದೆ.
  • ಶಾಪಿಂಗ್ ಮಾಲ್, ಈಜುಕೊಳ, ಬಾರ್, ಸಭೆ ಸಮಾರಂಭಗಳಿಗೆ ನಿರ್ಬಂಧವಿದೆ.
  • ಕ್ರೀಡಾ ಚಟುವಟಿಕೆಗಳಿಗೆ ಷರತ್ತುಗಳೊಂದಿಗೆ ಅವಕಾಶ ನೀಡಿದ್ದರೂ ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ.
  • ಸಾಂಸ್ಕೃತಿಕ, ಮನರಂಜನೆ, ಧಾರ್ಮಿಕ, ರಾಜಕೀಯ, ಸಾಮಾಜಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಮುಂದುವರೆದಿದೆ.
  • ಜನ ಸೇರುವುದಕ್ಕೆ ನಿಷೇಧವಿರುತ್ತದೆ. ದೇವಾಲಯ, ಮಂದಿರ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಮುಂದುವರೆದಿದೆ.

ಯಾವುದಕ್ಕೆ ಅವಕಾಶ ?

  • ಆಯ್ದ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ.
  • ಗೂಡ್ಸ್, ಕಾರ್ಗೋ ಟ್ರಕ್ ಓಡಾಟಕ್ಕೆ ಅವಕಾಶವಿದೆ ಎನ್ನಲಾಗಿದೆ.

ಅನಾರೋಗ್ಯದಿಂದ ಬಳಲುತ್ತಿರುವವರು, 50 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ.

- Advertisement -
spot_img

Latest News

error: Content is protected !!