Thursday, June 4, 2026
Homeಕರಾವಳಿಉಡುಪಿಬನ್ನಂಜೆ ವ್ಯಕ್ತಿ ಹೃದಯಾಘಾದಿಂದ ಮೃತ್ಯು: ಕೊರೋನ ಟೆಸ್ಟ್ ನೆಗೆಟಿವ್

ಬನ್ನಂಜೆ ವ್ಯಕ್ತಿ ಹೃದಯಾಘಾದಿಂದ ಮೃತ್ಯು: ಕೊರೋನ ಟೆಸ್ಟ್ ನೆಗೆಟಿವ್

- Advertisement -
- Advertisement -

ಉಡುಪಿ, ಮೇ 17: ಉಡುಪಿ ಬನ್ನಂಜೆಯ 44 ವರ್ಷ ವಯಸ್ಸಿನ ವ್ಯಕ್ತಿ ಯೊಬ್ಬರು ಹೃದಯಾಘಾತದಿಂದ ಮೇ 16ರಂದು ರಾತ್ರಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ವ್ಯಕ್ತಿಗೆ ನಡೆಸಿದ ಕೊರೋನ ಟೆಸ್ಟ್ ನೆಗೆಟಿವ್ ಆಗಿ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಜ್ವರ, ಶೀತ, ಕೆಮ್ಮುವಿನಿಂದ ಬಳಲುತ್ತಿದ್ದ ಈ ವ್ಯಕ್ತಿಗೆ ನಿನ್ನೆ ರಾತ್ರಿ ಎದೆನೋವಿನ ಕಾಣಿಸಿಕೊಂಡಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ರಾತ್ರಿ ವೇಳೆ ಇವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ

ಇಸಿಜಿ ಪರೀಕ್ಷೆಯಲ್ಲಿ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇರುವುದು ಕಂಡುಬಂದಿದ್ದರೂ, ಮೃತವ್ಯಕ್ತಿ ಕೊರೋನ ರೋಗದ ಲಕ್ಷಣವನ್ನೂ ಹೊಂದಿದ್ದರಿಂದ ರಾತ್ರಿಯೇ ಅವರ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸಿದ್ದು, ಇಂದು ಅದು ನೆಗೆಟಿವ್ ಆಗಿ ಬಂದಿದೆ ಎಂದವರು ಹೇಳಿದರು.

- Advertisement -

Latest News

error: Content is protected !!