- Advertisement -
- Advertisement -
- ಬೆಳ್ತಂಗಡಿ: ಇಲ್ಲಿನ ಪ್ರಸಿದ್ಧ ದಿಡುಪೆ ಜಲಪಾತಕ್ಕೆ ವಿಧಿಸಲಾಗಿದ್ದ ತಾತ್ಕಾಲಿಕ ನಿಷೇಧವನ್ನು ಅರಣ್ಯ ಇಲಾಖೆ ಹಿಂಪಡೆದಿದ್ದು, ಸೆಪ್ಟೆಂಬರ್ 7ರಿಂದ ಪ್ರವಾಸಿಗರ ವೀಕ್ಷಣೆಗೆ ಜಲಪಾತವನ್ನು ಮುಕ್ತಗೊಳಿಸಲಾಗಿದೆ.
ಜುಲೈ 20ರಿಂದ ಭಾರೀ ಮಳೆಯ ಹಿನ್ನೆಲೆಯಲ್ಲಿ ಭದ್ರತೆಯ ಹಿತದೃಷ್ಟಿಯಿಂದ ಪ್ರವೇಶವನ್ನು ತಡೆಹಿಡಿಯಲಾಗಿತ್ತು. ಇದೀಗ ಮಳೆ ಕಡಿಮೆಯಾಗಿದ್ದು, ಸುರಕ್ಷತೆಯನ್ನು ಪರಿಶೀಲಿಸಿದ ಬಳಿಕ ವನ್ಯಜೀವಿ ವಿಭಾಗದ ಅಧಿಕಾರಿ ಶರ್ಮಿಷ್ಟಾ ಈ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ನೀರಿನ ಸೆಳೆತ ಮತ್ತು ಜಾರುವ ಬಂಡೆಗಳ ಕಾರಣದಿಂದ ಪ್ರವಾಸಿಗರು ಜಲಪಾತದ ಬಳಿ ಜಾಗರೂಕರಾಗಿರಲು ಇಲಾಖೆ ಸೂಚಿಸಿದೆ.
ಇನ್ನು ಬೆಟ್ಟದ ಮೇಲ್ಭಾಗದಿಂದ ನೀರು ಹರಿಯುತ್ತಿರುವುದರಿಂದ ಗಡಾಯಿಕಲ್ಲು ಚಾರಣಕ್ಕೆ ವಿಧಿಸಲಾಗಿರುವ ನಿಷೇಧ ಮತ್ತಷ್ಟು ದಿನ ಮುಂದುವರಿಯಲಿದೆ.
- Advertisement -


