Monday, September 7, 2026
HomeUncategorizedಉಡುಪಿ; ಉದ್ಯಮಿ ಕುಶಲ ಶೆಟ್ಟಿ ಮುಂಬೈನಲ್ಲಿ ನಿಧನ

ಉಡುಪಿ; ಉದ್ಯಮಿ ಕುಶಲ ಶೆಟ್ಟಿ ಮುಂಬೈನಲ್ಲಿ ನಿಧನ

- Advertisement -
- Advertisement -

ಉಡುಪಿ: ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯೆ ಸುಪ್ರಿಯಾ ಶೆಟ್ಟಿ ಅವರ ಪತಿ, ಉದ್ಯಮಿ ಕುಶಲ ಶೆಟ್ಟಿ (59) ಅವರು ಸೆಪ್ಟೆಂಬರ್ 6ರಂದು ಮುಂಬೈ ರೈಲ್ವೇ ನಿಲ್ದಾಣದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೂಲತಃ ಉಡುಪಿ ಕಡೆಕಾರಿನವರಾದ ಕುಶಲ ಶೆಟ್ಟಿ ಅವರು ಮುಂಬೈನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು, ಭಾನುವಾರ ಸ್ವಗ್ರಾಮಕ್ಕೆ ಮರಳಲು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ದಿಢೀರ್ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Latest News

error: Content is protected !!