- Advertisement -
![]()
- Advertisement -
ಬೆಂಗಳೂರು : ಶೀಘ್ರದಲ್ಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ ಹೀಟ್ ಅನ್ನು ಕೋರ್ಟ್ ಗೆ ಸಲ್ಲಿಕೆ ಮಾಡಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಮಾಹಿತಿ ನೀಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ನಟ ದರ್ಶನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ. ಹೈದರಾಬಾದ್ ನಿಂದ FSL ವರದಿ ಬಂದ ತಕ್ಷಣ ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ.ರೇಣುಕಾ ಸ್ವಾಮಿ ಕೊಲೆ ಕೇಸಿನ ವರದಿ ಸಿಕ್ಕಿದೆ ಎಂದಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಕೇಸಿನ ವರದಿ ಸಿಕ್ಕಿದೆ. ಬೆಂಗಳೂರು ಎಫ್ ಎಸ್ ಎಲ್ ನಿಂದ ವರದಿ ಬಂದಿದೆ. ಇದೀಗ ಹೈದರಾಬಾದ್ ನಿಂದ ಎಫ್ಎಸ್‌ಎಲ್ ವರದಿ ಬರಬೇಕಿದೆ. ಹಾಗಾಗಿ ಅದು ಬಂದ ತಕ್ಷಣ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
- Advertisement -


