Thursday, June 4, 2026
Homeಕರಾವಳಿಉಡುಪಿಉಡುಪಿ; ಸಾಲಿಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಕೊಂದ ಪ್ರಕರಣ; ಹೆಂಡತಿಯ ರೀಲ್ಸ್ ಹುಚ್ಚು ತಡೆಯಲಾರದೆ ಕೊಲೆ

ಉಡುಪಿ; ಸಾಲಿಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಕೊಂದ ಪ್ರಕರಣ; ಹೆಂಡತಿಯ ರೀಲ್ಸ್ ಹುಚ್ಚು ತಡೆಯಲಾರದೆ ಕೊಲೆ

- Advertisement -
- Advertisement -

ಉಡುಪಿ; ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆಯಲ್ಲಿ ಬೆಳ್ಳಂಬೆಳಗ್ಗೆ ಪತಿಯೇ ಪತ್ನಿಯನ್ನು ಕೊಲೆಗೈದಿದ್ದ. ಕಿರಣ್ ಉಪಾಧ್ಯ ಗುಂಡ್ಮಿ(44) ಎಂಬಾತ ತನ್ನ ಪತ್ನಿ  ಬೀದರ್ ದೊಣಗಪುರ ಮೂಲದ ಜಯಶ್ರೀ(31)  ಎಂಬಾಕೆಯನ್ನು ಕೊಲೆಗೈದಿದ್ದ. ಆದರೀಗ ಕೊಲೆ ಕಾರಣ ಬಹಿರಂಗವಾಗಿದೆ.

ಹೌದು. ಜಯಶ್ರೀ ವಿಪರೀತ ರೀಲ್ಸ್ ಹುಚ್ಚು ಬೆಳೆಸಿಕೊಂಡಿದ್ದಳು. ಆಕೆಯ ರೀಲ್ಸ್ ವಿಚಾರಕ್ಕಾಗಿಯೇ ಬೆಳ್ಳಂಬೆಳಗ್ಗೆ ಜಗಳವಾಗಿ ಪತ್ನಿಯನ್ನು ಕೊಲೆಗೈದಿದ್ದಾನೆ ಅನ್ನೋದು ಗೊತ್ತಾಗಿದೆ. ಕಿರಣ್ ಕಳೆದ ಎರಡು ವರ್ಷಗಳಿಂದ ನರಸಿಂಹ ದೇವಸ್ಥಾನದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದನು ಎಂದು ತಿಳಿದುಬಂದಿದೆ. ಕೋಟ ಪೊಲೀಸರು ತನಿಖೆ ನಡೆಸುತ್ತಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!