Thursday, June 4, 2026
Homeಕರಾವಳಿಉಡುಪಿಉಡುಪಿ ನಗರಸಭೆ ಅಧ್ಯಕ್ಷರಾಗಿ ಪ್ರಭಾಕರ್ ಪೂಜಾರಿ, ಉಪಾಧ್ಯಕ್ಷರಾಗಿ ರಜನಿ ಹೆಬ್ಬಾರ್ ಆಯ್ಕೆ

ಉಡುಪಿ ನಗರಸಭೆ ಅಧ್ಯಕ್ಷರಾಗಿ ಪ್ರಭಾಕರ್ ಪೂಜಾರಿ, ಉಪಾಧ್ಯಕ್ಷರಾಗಿ ರಜನಿ ಹೆಬ್ಬಾರ್ ಆಯ್ಕೆ

- Advertisement -
- Advertisement -

ಉಡುಪಿ: ಇಲ್ಲಿನ ನಗರಸಭೆ‌ಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು,‌ ಅಧ್ಯಕ್ಷರಾಗಿ ಗುಂಡಿಬೈಲು ವಾರ್ಡ್ ಸದಸ್ಯ ಪ್ರಭಾಕರ್ ಪೂಜಾರಿ, ಉಪಾಧ್ಯಕ್ಷರಾಗಿ ಒಳಕಾಡು ವಾರ್ಡ್ ಸದಸ್ಯೆ ರಜನಿ ಹೆಬ್ಬಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೊದಲ‌ ಅವಧಿಯಲ್ಲಿ 2 ವರ್ಷ ಆರು ತಿಂಗಳುಗಳ ಕಾಲ ಅಧ್ಯಕ್ಷರಾಗಿ‌ ಸುಮಿತ್ರಾ ನಾಯಕ್, ಉಪಾಧ್ಯಕ್ಷರಾಗಿ ಲಕ್ಷ್ಮೀ ಮಂಜುನಾಥ ಅಧಿಕಾರ ವಹಿಸಿಕೊಂಡು ಸೇವೆಯನ್ನು ಪೂರೈಸಿದ್ದರು.‌ 

ಇದೀಗ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ‌ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಘೋಷಣೆಯಾಗಿ ಚುನಾವಣೆ ನಡೆದಿದ್ದು ಪಕ್ಷದ ಕೋರ್ ಕಮಿಟಿ ನಿರ್ಧಾರದಂತೆ ಉಡುಪಿ ನಗರಸಭೆ 10 ನೇ‌‌ ಅಧ್ಯಕ್ಷರಾಗಿ ಪ್ರಭಾಕರ್ ಪೂಜಾರಿ, ಉಪಾಧ್ಯಕ್ಷರಾಗಿ ರಜನಿ‌ ಹೆಬ್ಬಾರ್ ಆಯ್ಕೆಯಾಗಿದ್ದಾರೆ. ನಗರಸಭೆ 35 ವಾರ್ಡ್ ಹೊಂದಿದ್ದು,‌ ಬಿಜೆಪಿ‌ 32 ಸದಸ್ಯರ ಬಲ ಹೊಂದಿದೆ. ಕುಂದಾಪುರ ಉಪ ವಿಭಾಗ ಆಯುಕ್ತ ಮಹೇಶ್ಚಂದ್ರ‌ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.

- Advertisement -

Latest News

error: Content is protected !!