Saturday, April 20, 2024
Homeತಾಜಾ ಸುದ್ದಿದಾಖಲೆ ಬರೆದ ಅಸ್ಸಾಂ ಚಹಾ: ಕೆಜಿಗೆ 1 ಲಕ್ಷ ರೂ.ಗೆ ಮಾರಾಟವಾದ ವಿಶೇಷ ಸಾವಯವ ಟೀ

ದಾಖಲೆ ಬರೆದ ಅಸ್ಸಾಂ ಚಹಾ: ಕೆಜಿಗೆ 1 ಲಕ್ಷ ರೂ.ಗೆ ಮಾರಾಟವಾದ ವಿಶೇಷ ಸಾವಯವ ಟೀ

spot_img
- Advertisement -
- Advertisement -

ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಅಪರೂಪದ ಸಾವಯವ ಚಹಾ ಪಭೋಜನ್ ಗೋಲ್ಡ್ ಟೀ ಸೋಮವಾರ ಜೋರ್ಹತ್‌ನ ಹರಾಜು ಕೇಂದ್ರದಲ್ಲಿ ಪ್ರತಿ ಕಿಲೋಗ್ರಾಂಗೆ 1 ಲಕ್ಷ ರೂ.ಗೆ ಮಾರಾಟವಾಗಿದೆ. ಇದು ಈ ವರ್ಷದ ಅತಿ ಹೆಚ್ಚಿನ ದರ ಪಡೆದುಕೊಂಡ ಚಹಾ ಎನಿಸಿಕೊಂಡಿದೆ. ಪಭೋಜನ್ ಆರ್ಗ್ಯಾನಿಕ್ ಟೀ ಎಸ್ಟೇಟ್ ಮಾರಾಟ ಮಾಡಿದ ಚಹಾವನ್ನು ಅಸ್ಸಾಂ ಮೂಲದ ಟೀ ಬ್ರ್ಯಾಂಡ್ ‘ಎಸಾಹ್ ಟೀ’ ಖರೀದಿಸಿದೆ ಎಂದು ಜೋರ್ಹತ್ ಟೀ ಹರಾಜು ಕೇಂದ್ರದ (ಜೆಟಿಎಸಿ) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪಭೋಜನ್ ಗೋಲ್ಡ್ ಟೀ ಕಡು ಹಳದಿ ಬಣ್ಣದಿಂದ ಕೂಡಿರಲಿದ್ದು ಇದು ಕುಡಿದ ನಂತರ ಹಿತವಾದ ರುಚಿಯ ಅನುಭವವನ್ನು ನೀಡುತ್ತದೆ. ಇದನ್ನು ಚಹಾ ಎಸ್ಟೇಟ್‌ನಲ್ಲಿ ಎರಡನೇ ಚಿಗುರುಗಳನ್ನು ಕಿತ್ತು ತಯಾರಿಸಲಾಗುತ್ತದೆ. ಈ ಚಿಗುರುಗಳು ಚಿನ್ನದ ಬಣ್ಣಕ್ಕೆ ತಿರುಗುವುದಲ್ಲದೆ, ಚಹಾಕ್ಕೂ ಉತ್ತಮ ಬಣ್ಣವನ್ನು ನೀಡುತ್ತವೆ.

ಪಭೋಜನ್ ಆರ್ಗ್ಯಾನಿಕ್ ಟೀ ಎಸ್ಟೇಟ್‌ನ ಮಾಲಕಿ ರಾಖಿ ದತ್ತಾ ಸೈಕಿಯಾ ಮಾತನಾಡಿದ್ದು, “ನಾವು ಈ ಅಪರೂಪದ ವಿಧದ ಚಹಾವನ್ನು ಕೇವಲ ಒಂದು ಕೆಜಿ ಉತ್ಪಾದಿಸಿದ್ದು, ಇತಿಹಾಸ ಸೃಷ್ಟಿಸುವ ಹೊಸ ದಾಖಲೆಯ ಬೆಲೆ ಪಡೆದುಕೊಂಡಿದ್ದಕ್ಕೆ ಸಂತೋಷವಾಗಿದೆ. ಈ ಚಹಾ ಪಡೆದುಕೊಂಡ ಬೆಲೆಯು ಅಸ್ಸಾಂ ಚಹಾ ಉದ್ಯಮಕ್ಕೆ ಕಳೆದುಹೋದ ಖ್ಯಾತಿಯನ್ನು ಮರಳಿ ಪಡೆಯಲು ಸಹಾಯ ಮಾಡಲಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ವಿಧದ ಪ್ರೀಮಿಯಂ ಗುಣಮಟ್ಟದ ವಿಶೇಷ ಚಹಾಕ್ಕಾಗಿ ವಿವೇಚನಾಶೀಲ ಗ್ರಾಹಕರು, ಚಹಾ ಪ್ರಿಯರು ಮತ್ತು ಖರೀದಿದಾರರಿಂದ ಹೆಚ್ಚಿನ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಈ ವಿಧದ ಚಹಾವನ್ನು ಮೊದಲ ಬಾರಿಗೆ ತಯಾರಿಸಲಾಯಿತು ಎಂದು ಸೈಕಿಯಾ ಹೇಳಿದ್ದಾರೆ.

- Advertisement -
spot_img

Latest News

error: Content is protected !!