Sunday, May 19, 2024
Homeತಾಜಾ ಸುದ್ದಿಅತ್ಯಾಚಾರ ಪ್ರಕರಣಗಳ ಕಡಿವಾಣಕ್ಕೆ ತುರ್ತು ಪರಿಸ್ಥಿತಿ ಹೇರಿದ ಪಂಜಾಬ್‌ ಸರ್ಕಾರ: ಪಂಜಾಬ್‌ ಪ್ರಾಂತ್ಯದಲ್ಲಿ ದೈನಂದಿನ 5-6...

ಅತ್ಯಾಚಾರ ಪ್ರಕರಣಗಳ ಕಡಿವಾಣಕ್ಕೆ ತುರ್ತು ಪರಿಸ್ಥಿತಿ ಹೇರಿದ ಪಂಜಾಬ್‌ ಸರ್ಕಾರ: ಪಂಜಾಬ್‌ ಪ್ರಾಂತ್ಯದಲ್ಲಿ ದೈನಂದಿನ 5-6 ಅತ್ಯಾಚಾರ ಪ್ರಕರಣಗಳು ದಾಖಲು

spot_img
- Advertisement -
- Advertisement -

ಇಸ್ಲಮಾಬಾದ್‌: ಆರ್ಥಿಕ, ರಾಜಕೀಯ ಸಂಕಷ್ಟದ ಬಾಣಲೆಯಲ್ಲಿ ಬೇಯುತ್ತಿರುವ ಪಾಕಿಸ್ತಾನದಲ್ಲಿ ಇದೀಗ ಗಂಭೀರ ಕಾನೂನು ಸುವ್ಯಸಸ್ಥೆಯ ಸಮಸ್ಯೆ ಎದುರಾಗಿದೆ. ಅತ್ಯಾಚಾರ ಹಾಗೂ ಹೆಣ್ಮಕ್ಕಳ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಆ ಮೂಲಕ ಮತ್ತೊಂದು ವಿಕ್ಷಿಪ್ತ ಸನ್ನಿವೇಶ ಪಾಕಿಸ್ತಾನದಲ್ಲಿ ಸೃಷ್ಠಿಯಾಗಿದೆ

ಪ್ರಾಂತ್ಯದಲ್ಲಿ ಸರಣಿ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿ ಹೇರಿ ಅಲ್ಲಿನ ಸರ್ಕಾರ ಆದೇಶಿಸಿದೆ. ಪ್ರಾಂತ್ಯದಲ್ಲಿ ಸರಣಿ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿ ಹೇರಿ ಅಲ್ಲಿನ ಸರ್ಕಾರ ಆದೇಶಿಸಿದೆ. ಪ್ರಾಂತ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅನಿವಾರ್ಯವಾಗಿ ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕಾಗಿ ಬಂದಿದೆ’ ಎಂದು ಪಂಜಾಬ್‌ ಪ್ರಾಂತ್ಯದ ಗೃಹ ಸಚಿವ ಆಟ್ಟಾ ತರಾರ್‌ ಅವರು ಹೇಳಿದ್ದಾರೆ.

ಪಂಜಾಬ್‌ ಪ್ರಾಂತ್ಯದಲ್ಲಿ ದಿನನಿತ್ಯ ಐದರಿಂದ ಆರು ಲೈಂಗಿಕ ಕಿರುಕುಳದ ಪ್ರಕರಣಗಳು ದಾಖಲಾಗುತ್ತಿದೆ. ಈ ಪ್ರಕರಣಗಳನ್ನು ನಿಯಂತ್ರಣ ತರುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಪ್ರಕರಣಗಳನ್ನು ಗಂಭೀರವಾಗು ಪರಿಗಣಿಸಿರುವ ಸರ್ಕಾರ ಅವುಗಳ ನಿಯಂತ್ರಣಕ್ಕೆ ತುರ್ತು ಪರಿಸ್ಥಿತಿ ಹೇರುವ ಅನಿವಾರ್ಯತೆಗೆ ಸಿಲುಕಿದೆ ಎಂದು ಪಾಕಿಸ್ತಾನದ ಪ್ರತಿಷ್ಠಿತ ಪ್ರತ್ರಿಕೆಯೊಂದು ವರದಿ ಮಾಡಿದೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸರ್ಕಾರ ಕಠಿಣ ನಿರ್ದೇಶನ ನೀಡಿದೆ. ಅಲ್ಲದೇ ಸದ್ಯ ದಾಖಲಾಗಿರುವ ಮಹಿಳಾ ದೌರ್ಜನ್ಯದ ಪ್ರಕರಣಗಳನ್ನು ಸಚಿವ ಸಂಪುಟದ ವಿಶೇಷ ಸಮಿತಿ ಪರಿಶೀಲನೆ ನಡೆಸಲಿದೆ. ಕಾನೂನು ಭಂಗ ಉಂಟಾಗದಂತೆ ಪರಿಸ್ಥಿತಿ ನಿಭಾಯಿಸಿ ಎನ್ನುವ ಸೂಚನೆ ಪೊಲೀಸರಿಗೆ ನೀಡಲಾಗಿದೆ. ನಾಗರಿಕ ಸಮಾಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಘಟನೆಗಳು ಈ ಥರದ ಘಟನೆಗಳನ್ನು ಪತ್ತೆ ಹಚ್ಚಿ ಮಾಹಿತಿ ನೀಡಿ ಎಂದು ಸರ್ಕಾರ ಕೋರಿಕೊಂಡಿದೆ.

- Advertisement -
spot_img

Latest News

error: Content is protected !!