- Advertisement -
- Advertisement -
ನವದೆಹಲಿ: ಕೆಲವು ದಿನಗಳ ಹಿಂದೆ ಎಂ.ಎಸ್. ಧೋನಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಪ್ರಕರಣ ಮರೆಯುವ ಮುನ್ನ ಇದೀಗ ಅಂತಹುದೇ ಬೆದರಿಕೆಯನ್ನು ತಮಿಳು ನಟ ವಿಜಯ್ ಸೇತುಪತಿಗೂ ಹಾಕಲಾಗಿದ್ದು ಮುತ್ತಯ್ಯ ಮುರಳೀಧರನ್ ಬಯೋಪಿಕ್ ‘800’ ಹೆಸರಿನ ಚಿತ್ರದಿಂದ ಸಾಮಾಜಿಕ ಒತ್ತಡದಿಂದಾಗಿ ವಿಜಯ್ ಸೇತುಪತಿ ಹೊರ ನಡೆದಿದ್ದಾರೆ.
ಅಲ್ಲದೆ, ಟ್ವೀಟ್ ಮೂಲಕವೂ ಇದನ್ನು ಖಚಿತಪಡಿಸಿದ್ದರು.ಇದರ ಬೆನ್ನಲ್ಲೇ ಸೇತುಪತಿ ಅವರ ಟ್ರೋಲ್ ಸಂದರ್ಭ ಅವರ ಮಗಳನ್ನು ಅತ್ಯಾಚಾರ ಮಾಡುವ ಬೆದರಿಕೆ ಸಂದೇಶವೊಂದು ಹರಿದು ಬಂದಿತ್ತು. ಇದರ ವಿರುದ್ಧ ಸ್ವತಃ ನೆಟ್ಟಿಗರೇ ಕಿಡಿಕಾರಿದ್ದಾರೆ. ಸಿನಿಮಾ ಮಂದಿಯು ಸಹ ಅಸಮಾಧಾನ ಹೊರಹಾಕಿದ್ದು ಶೀಘ್ರ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ.
- Advertisement -