Friday, June 5, 2026
Homeತಾಜಾ ಸುದ್ದಿನಾಯಕ ನಟನಾಗಿ ಮಿಂಚಲಿದ್ದಾರೆ ಹಾಸ್ಯನಟ ಚಿಕ್ಕಣ್ಣ- ಉಪಾಧ್ಯಕ್ಷನಿಗೆ ಭರ್ಜರಿ ಮುಹೂರ್ತ!..

ನಾಯಕ ನಟನಾಗಿ ಮಿಂಚಲಿದ್ದಾರೆ ಹಾಸ್ಯನಟ ಚಿಕ್ಕಣ್ಣ- ಉಪಾಧ್ಯಕ್ಷನಿಗೆ ಭರ್ಜರಿ ಮುಹೂರ್ತ!..

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ಹಾಸ್ಯನಟ ಚಿಕ್ಕಣ್ಣ ಬಹು ನಿರೀಕ್ಷೆಯ ಉಪಾಧ್ಯಕ್ಷ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಪೂರ್ಣಪ್ರಮಾಣದಲ್ಲಿ ನಾಯಕರಾಗುತ್ತಿರುವ ಚಿಕ್ಕಣ್ಣ ಮೊದಲ ಬಾರಿಗೆ ಹೀರೋ ಆಗುತ್ತಿರುವ ಸಿನಿಮಾವನ್ನು ರಾಬರ್ಟ್ ನಿರ್ಮಾಪಕ ಉಮಾಪತಿ ಗೌಡ ನಿರ್ಮಿಸಲಿದ್ದು, ಚಂದ್ರ ಮೋಹನ್ ನಿರ್ದೇಶಿಸುತ್ತಿದ್ದಾರೆ.

ಹಾಸ್ಯ ನಟ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ಉಪಾಧ್ಯಕ್ಷ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನಲ್ಲಿ ನಡೆದಿದ್ದು. ಕೆಲ ವರ್ಷಗಳ ಹಿಂದೆ ಶರಣ್-ಚಿಕ್ಕಣ್ಣ ಕಾಂಬಿನೇಷನ್‌ನಲ್ಲಿ ಅಧ್ಯಕ್ಷ ಸಿನಿಮಾ ದಲ್ಲಿ ಉಪಾಧ್ಯಕ್ಷನಾಗಿ ಮಿಂಚಿದ್ದ ಚಿಕ್ಕಣ್ಣ ಹೀರೋ ಆಗಿರುವ ಸಿನಿಮಾದಲ್ಲಿ ಅದನ್ನೇ ಟೈಟಲ್ ಮಾಡಲಾಗಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು ಡಿಸೆಂಬರ್ ತಿಂಗಳಿನಲ್ಲಿ ಶೂಟಿಂಗ್ ಆರಂಭವಾಗಲಿದೆ.

- Advertisement -

Latest News

error: Content is protected !!