Friday, June 5, 2026
Homeತಾಜಾ ಸುದ್ದಿಸ್ಯಾನಿಟೈಸರ್ ಗೆ ಸಾರಾಯಿ ಸೇರಿಸಿ ಸೇವನೆ : ಮಸಣ ಸೇರಿದ ಐವರು

ಸ್ಯಾನಿಟೈಸರ್ ಗೆ ಸಾರಾಯಿ ಸೇರಿಸಿ ಸೇವನೆ : ಮಸಣ ಸೇರಿದ ಐವರು

- Advertisement -
- Advertisement -

ಕೇರಳಃ ಲಾಕ್ ಡೌನ್ ವೇಳೆ ಮದ್ಯ ಸಿಗದೇ ಹಲವು ಕಡೆ ಅನೇಕರು ಅಲ್ಕೋಹಾಲ್ ರೂಪದಲ್ಲಿ ಸ್ಯಾನಿಟೈಸರ್ ಸೇವಿಸಿ ಅಸ್ವಸ್ಥಗೊಂಡ ಅನೇಕ ಘಟನಗಳನ್ನು ನಡೆದಿದ್ದವು. ಇದೇ ರೀತಿ ಸ್ಯಾನಿಟೈಸರ್ ಗೆ ಮದ್ಯ ಮಿಕ್ಸ್ ಮಾಡಿ ಕುಡಿದು ಕೇರಳದಲ್ಲಿ ಐವರು ಮಸಣ ಸೇರಿದ್ದಾರೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಕಾಂಜಿಕೋಡ್ ನಲ್ಲಿ ಸಾರಾಯಿಗೆ ಸ್ಯಾನಿಟೈಸರ್ ಮಿಕ್ಸ್ ಮಾಡಿಕೊಂಡು ಕುಡಿದ ಪರಿಣಾಮ, ಐವರು ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಮೃತರನ್ನು ರಾಮನ್, ಅಯ್ಯಪ್ಪನ್, ಅರುಣ್, ಶಿವನ್ ಹಾಗೂ ಮೂರ್ತಿ ಎಂದು ಗುರ್ತಿಸಲಾಗಿದೆ.

ಇನ್ನೂ ಮಹಿಳೆಯರು ಸೇರಿದಂತೆ ಹಲವರು ಅಸ್ವಸ್ಥಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ತಪ್ಪಿಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!